Home News School asks to Children to write about ‘ X ‘: ಈ ಶಾಲೆಯಲ್ಲಿ...

School asks to Children to write about ‘ X ‘: ಈ ಶಾಲೆಯಲ್ಲಿ ಮಕ್ಕಳಿಗೆ ‘ ಅದರ ‘ ಬಗ್ಗೆ ಪ್ರಬಂಧ ಬರೆಯಲು ಹೇಳಿದ ಶಿಕ್ಷಕರು, ಮುಂದೆ ಏನಾಯಿತು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

School asks to Children to write about X : ಲೈಂಗಿಕತೆಯ ಬಗ್ಗೆ ಇವತ್ತಿಗೂ ಜನರು ಮುಕ್ತವಾಗಿ ಮಾತನಾಡೋಕೆ ಹಿಂಜರಿಯುತ್ತಾರೆ. ಸೆಕ್ಸ್ (ಸೆಕ್ಸ್ ರೈಟಿಂಗ್) ಬಗ್ಗೆ ಗುಟ್ಟು ಗುಟ್ಟಾಗಿ ಮಾತ್ರ ಮಾತನಾಡುತ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಇದರ ಬಗ್ಗೆ ಮಾತನಾಡುವುದು ಸಹ ತಪ್ಪೆಂದುಕ್ಕೊಳ್ಳುತ್ತಾರೆ. ಆದ್ರೆ ಅಮೇರಿಕಾದಲ್ಲೊಂದು ಶಾಲೆ ಎಂಥಾ ಕೆಲಸ ಮಕ್ಕಳ ಕೈಯಲ್ಲಿ ಮಾಡಿಸಿದೆ ಗೊತ್ತೆ ?

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೆಲವು ವಿಚಾರಗಳ ಕುರಿತಾಗಿ ಪ್ರಬಂಧ ಬರೆಯಲು ಶಿಕ್ಷಕರು ಹೇಳುತ್ತಾರೆ. ಆದರೆ ಇಲ್ಲೊಂದು ಶಾಲೆಯಲ್ಲಿ ಲೈಂಗಿಕತೆ ಬಗ್ಗೆ ಒಂದು ಪುಟದ ಪ್ರಬಂಧ ಬರೆಯಲು ವಿದ್ಯಾರ್ಥಿಗಳಿಗೆ ಹೇಳುವ ಮೂಲಕವಾಗಿ ಸುದ್ದಿಯಾಗಿದೆ. ಲೈಂಗಿಕ ಆಟಿಕೆಗಳನ್ನು ಒಳಗೊಂಡಂತೆ “ಲೈಂಗಿಕ ಫ್ಯಾಂಟಸಿ” ಅನ್ನು ವಿವರಿಸುವ ಸಣ್ಣ ಕಥೆಯನ್ನು (Short story) ಬರೆಯಲು ಹೇಳಲಾಯಿತು. ‘ನೀವು ಒಂದು ಅಥವಾ ಎರಡು ಪ್ಯಾರಾಗ್ರಾಫ್‌ಗಳ ಸಣ್ಣ ಕಥೆಯನ್ನು ಬರೆಯುತ್ತೀರಿ. ಈ ಕಥೆಯು ಲೈಂಗಿಕ ಫ್ಯಾಂಟಸಿಯಾಗಿರಬೇಕು ಎಂದು ಅದರಲ್ಲಿ ಇದರಲ್ಲಿ ಸೂಚನೆ ನೀಡಲಾಗಿತ್ತು.

ಯುಎಸ್‌ನ ಒರೆಗಾನ್‌ನಲ್ಲಿ ಶಾಲೆ (School) ಯೊಂದರಲ್ಲಿ ಸೆಕ್ಸ್ ಬಗ್ಗೆ ಅಸೈನ್‌ಮೆಂಟ್ ಬರುವಂತೆ ಮಕ್ಕಳಿಗೆ ಸೂಚನೆ (Instruction) ನೀಡಲಾಗಿದೆ. ಲೈಂಗಿಕ ಫ್ಯಾಂಟಸಿಯ ಸಣ್ಣ ಕಥೆಯನ್ನು ರಚಿಸಲು ಶಾಲಾ ಮಕ್ಕಳಿಗೆ ಹೋಂವರ್ಕ್‌ ನೀಡಲಾಗಿತ್ತು. ಕಥೆಯಲ್ಲಿ ಪ್ರಣಯ ಸಂಗೀತ, ಮೇಣದಬತ್ತಿಗಳು, ಮಸಾಜ್, ಗರಿಗಳು, ಫೆದರ್ ಬೋವಾಸ್, ಸುವಾಸನೆಯ ಸಿರಪ್ ಮೊದಲಾದ ಪದಗಳನ್ನು ನೀವು ಆಯ್ಕೆ ಮಾಡಬಹುದು. ಕಥೆಯು ಲೈಂಗಿಕತೆಯನ್ನು ಹೊಂದದೆ ದೈಹಿಕ ಪ್ರೀತಿಯನ್ನು ತೋರಿಸಬಹುದು ಮತ್ತು ಸ್ವೀಕರಿಸಬಹುದು ಎಂದು ತೋರಿಸಬೇಕು’ ಎಂದು ಪ್ರಶ್ನೆ ಪತ್ರಿಕೆಯಲ್ಲಿ ಹೇಳಲಾಗಿತ್ತು.

ಈಗ ಅಲ್ಲಿನ ಶಿಕ್ಷಕರ ಇಂಥಾ ದುರ್ನಡತೆಗೆ ಪೋಷಕರು (Parents) ಆಕ್ರೋಶಗೊಂಡಿದ್ದಾರೆ. ಇನ್ನು ಕೆಲ ಪೋಷಕರು ಪಠ್ಯಕ್ರಮಗಳನ್ನು ಅಂಗೀಕರಿಸುವ ಮೊದಲು ಜಿಲ್ಲಾಡಳಿತ ಪರಿಶೀಲನೆ ನಡೆಸುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಕರು ‘ಲೈಂಗಿಕ ಫ್ಯಾಂಟಸಿ’ ಪಾಠವನ್ನು ಖಂಡಿಸಿದ್ದು, ಮಕ್ಕಳಿಗೆ ಇಂಥಾ ಬೋಧನೆಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.