Home News SBI: ಹಣ ವರ್ಗಾವಣೆಯಲ್ಲಿ ಫೆಬ್ರವರಿ 15ರಿಂದ ಹೊಸ ನೀತಿ ಆರಂಭ!

SBI: ಹಣ ವರ್ಗಾವಣೆಯಲ್ಲಿ ಫೆಬ್ರವರಿ 15ರಿಂದ ಹೊಸ ನೀತಿ ಆರಂಭ!

HDFC Bank

Hindu neighbor gifts plot of land

Hindu neighbour gifts land to Muslim journalist

SBI: ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರ ಟ್ರಾನ್ಸಾಕ್ಷನ್ ಪರಿಷ್ಕರಿಸಿದೆ. ಇದು ಪ್ರತಿ ದಿನ ಗ್ರಾಹಕರ ತಮ್ಮ ವಹಿವಾಟುಗಳ ಮೇಲೆ ಪರಿಣಾಮ ಬೀರಲಿದೆ. ಫೆಬ್ರವರಿ 15 ರಿಂದ ಐಎಂಪಿಎಸ್ ಮೂಲಕ ಹಣ ವರ್ಗಾವಣೆ, ಎಟಿಎಂ ಮೂಲಕ ಹಣ ವಿಥ್‌ಡ್ರಾ ಮಾಡುವಾಗ ಶುಲ್ಕ ಪಾವತಿಸಬೇಕು.

ಬಹುತೇಕರು ಹಣ ವರ್ಗಾವಣೆಗೆ ಐಎಂಪಿಎಸ್ ವಿಧಾನ ಆಯ್ಕೆ ಮಾಡುತ್ತಾರೆ. IMPS ಮೂಲಕ ಹಣ ತಕ್ಷಣ ವರ್ಗಾವಣೆಯಾಗುತ್ತದೆ. IMPS ಮೂಲಗ ಗರಿಷ್ಠ 5 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಲು ಸಾಧ್ಯ. ಇದೀಗ ಎಸ್‌ಬಿಐ ಬ್ಯಾಂಕ್ ತನ್ನ ಗ್ರಾಹಕರಿಗೆ 25,000 ರೂಪಾಯಿ ವರೆಗಿನ ಹಣ ವರ್ಗಾವಣೆಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಜನ ಸಾಮಾನ್ಯರು ಕಡಿಮೆ ಮೊತ್ತದ ಅಂದರೆ 25,000 ರೂಪಾಯಿವರೆಗೆ ಯಾವುದೇ ಶುಲ್ಕ ಇರುವುದಿಲ್ಲ. ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ ಆ್ಯಪ್, ಮೊಬೈಲ್ ಬ್ಯಾಂಕಿಂಗ್ ಮೂಲಕ ಗರಿಷ್ಠ 25,000ರೂ ವರೆಗೆ ಫ್ರಿ.

IMPS ವರ್ಗಾವಣೆ ಶುಲ್ಕದ ವಿವರ

25,000 ರೂಪಾಯಿಗಿಂತ ಮೇಲ್ಪಟ್ಟು IMPS ಮೂಲಕ ಹಣ ವರ್ಗಾವಣೆ ಮಾಡಲು ಶುಲ್ಕ ಅನ್ವಯವಾಗಲಿದೆ.ಶುಲ್ಕದ ವಿವರ ಇಲ್ಲಿದೆ

25,000 ರೂಪಾಯಿಯಿಂದ 1 ಲಕ್ಷ ರೂ ವರೆಗೆ : 2 ರೂಪಾಯಿ + GST

1 ಲಕ್ಷ ರೂಪಾಯಿಯಿಂದ 2 ಲಕ್ಷ ರೂ ವರೆಗೆ: 6 ರೂಪಾಯಿ + GST

2 ಲಕ್ಷ ರೂಪಾಯಿಯಿಂದ 6 ಲಕ್ಷ ರೂ ವರೆಗೆ : 10 ರೂಪಾಯಿ + GST

ಎಸ್‌ಬಿಐ ಬ್ಯಾಂಕ್ ಮೂಲಕ ಐಎಂಪಿಎಸ್ ಹಣ ವರ್ಗಾವಣೆಗೆ 2 ರೂಪಾಯಿಯಿಂದ 20 ರೂಪಾಯಿ ಜೊತೆಗೆ ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ಸದ್ಯ ಇರುವ ಶುಲ್ಕ ನೀತಿಯೇ ಮುಂದುವರಿಯಲಿದೆ.