Home News Sandalwood News: ನಟಿ ಅಮೂಲ್ಯ ಅಣ್ಣ ನಿಧನ

Sandalwood News: ನಟಿ ಅಮೂಲ್ಯ ಅಣ್ಣ ನಿಧನ

Hindu neighbor gifts plot of land

Hindu neighbour gifts land to Muslim journalist

Sandalwood News: ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಅವರ ಸಹೋದರ ದೀಪಕ್‌ ಅರಸ್‌ (46) ನಿಧನರಾಗಿರುವ ಕುರಿತು ವರದಿಯಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ನಿಧನರಾಗಿದ್ದಾರೆ.

ದೀಪಕ್‌ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕಿಡ್ನಿ ವೈಫಲ್ಯದ ಕಾರಣದಿಂದ ಅವರು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವಿಗೀಡಾಗಿದ್ದಾರೆ. ಎರಡೂ ಕಿಡ್ನಿ ವೈಫಲ್ಯಗೊಂಡಿದ್ದರಿಂದ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಶೇಷಾದ್ರಿಪುರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದೀಪಕ್‌ ಅರಸ್‌ ಅವರು ಪತ್ನಿ, ಪುತ್ರ, ಪುತ್ರಿಯರನ್ನು ಅಗಲಿದ್ದಾರೆ

ಅಮೂಲ್ಯ ಕುಟುಂಬದಲ್ಲಿ ಅಣ್ಣನ ಸಾವಿನ ವಿಷಯದ ನಂತರ ಶೋಕದ ವಾತಾವರಣ ನಿರ್ಮಾಣವಾಗಿದೆ. ದೀಪಕ್‌ ಅವರು ಮನಸಾಲಜಿ, ಶುಗರ್‌ ಫ್ಯಾಕ್ಟರಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.