Home News Umashree: ದರ್ಶನ್ ಬಂಧನದಿಂದ ಕನ್ನಡ ಚಿತ್ರರಂಗಕ್ಕೆ ಭಾರೀ ನಷ್ಟ – ನಟಿ ಉಮಾಶ್ರೀ ಹೇಳಿಕೆ!!

Umashree: ದರ್ಶನ್ ಬಂಧನದಿಂದ ಕನ್ನಡ ಚಿತ್ರರಂಗಕ್ಕೆ ಭಾರೀ ನಷ್ಟ – ನಟಿ ಉಮಾಶ್ರೀ ಹೇಳಿಕೆ!!

Hindu neighbor gifts plot of land

Hindu neighbour gifts land to Muslim journalist

Umashree: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದೆ. ಈ ಬೆನ್ನಲ್ಲೇ ಡಿ ಗ್ಯಾಂಗ್ ಮತ್ತೆ ಜೈಲು ಪಾಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡದ ಖ್ಯಾತ ನಟಿ ಉಮಾಶ್ರೀ ಅವರು ದರ್ಶನ್ ಬಂಧನದಿಂದ ಕನ್ನಡ ಚಿತ್ರರಂಗಕ್ಕೆ ಬಾರಿ ನಷ್ಟವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.

ನಟ ದರ್ಶನ್‌ (Actor Darshan) ಅವರ ಜಾಮೀನು ರದ್ದಾಗಿರುವುದರ ಬಗ್ಗೆ ಹಿರಿಯ ನಟಿ ಉಮಾಶ್ರೀ (Actress Umashree) ಪ್ರತಿಕ್ರಿಯೆ ನೀಡಿದ್ದು, ದರ್ಶನ್‌ ಅನೇಕ ಕೊಡುಗೆಗಳನ್ನ ಕೊಟ್ಟಿದ್ದಾರೆ. ಅವರನ್ನ ಬಂಧಿಸಿರುವುದು ಸಿನಿಮಾ ರಂಗಕ್ಕೆ ದೊಡ್ಡ ನಷ್ಡ ಎಂದು ಹೇಳಿದ್ದಾರೆ.

ಸುಪ್ರೀಕೋರ್ಟ್‌ ನಿರ್ಧಾರವನ್ನ ನಾವು ಗೌರವಿಸಬೇಕು. ಪ್ರತಿಯೊಬ್ಬ ನಾಗರೀಕರು ಒಪ್ಪಿಕೊಳ್ಳಬೇಕು. ನಮಗೂ ಈ ವಿಚಾರದಲ್ಲಿ ಬಹಳ ಅನಿವಾರ್ಯ. ನಾನು ಕೆಲ ಸಮಯದ ಹಿಂದೆ ಸಹ ಹೇಳಿದ್ದೆ, ಈಗಲೂ ಹೇಳುತ್ತೇನೆ. ನಾವು ಕಲಾವಿದರೂ ಎಂದಿಗೂ ಸಮಾಜದ ಸ್ವತ್ತು. ಜನ ನಮ್ಮನ್ನ ಬಹಳ ಗಮನಿಸುತ್ತಾರೆ. ಹಾಗಾಗಿ ನಾವು ಎಚ್ಚರಿಕೆಯಿಂದ ಇರಬೇಕು. ನಮ್ಮ ಮಾತು-ಕೆಲಸದಲ್ಲಿ ಮಿತಿ ಇರಬೇಕು ಎಂದು ಜನ ನಿರೀಕ್ಷೆ ಮಾಡುತ್ತಾರೆ ಎಂದು ಹೇಳಿದ್ದಾರೆ

ಅಲ್ಲದೆ ದರ್ಶನ್‌ ಬಹಳ ಮುಖ್ಯವಾದ ಕೊಡುಗೆಗಳನ್ನ ಕೊಟ್ಟಿದ್ದಾರೆ. ಅವರಿಂದ ಚಿತ್ರರಂಗದ ಬೆಳವಣಿಗೆ ಆಗಿದೆ. ಅವರಿಂದ ಚಿತ್ರರಂಗಕ್ಕೆ ಬಹಳ ಒಳ್ಳೆಯದು ಆಗಿದೆ. ಈ ಬಗ್ಗೆ ಅನುಮಾನವೇ ಇಲ್ಲ. ಆದರೆ ಈಗ ನಡೆದಿರುವ ಘಟನೆಯಿಂದ ಚಿತ್ರರಂಗಕ್ಕೆ ನಷ್ಟ ಸಹ ಆಗಿದೆ. ದರ್ಶನ್‌ನಿಂದ ಸಮಾಜಕ್ಕೆ ಹಾಗೂ ಚಿತ್ರರಂಗಕ್ಕೆ ಒಳ್ಳೆಯ ಕೆಲಸ ಆಗಬೇಕು. ಈ ಪ್ರಕರಣ ಇಲ್ಲಿಗೆ ಮುಗಿಯುತ್ತೆ ಅನಿಸೋದಿಲ್ಲ ಎಂದು ಹೇಳಿದ್ದಾರೆ.