Home News RSS Traniing: ಸುಳ್ಳನ್ನು ಸತ್ಯ ಮಾಡೋದೇ ಆರ್ ಎಸ್ ಎಸ್ ತರಬೇತಿ – ದಿನೇಶ್ ಗುಂಡೂರಾವ್

RSS Traniing: ಸುಳ್ಳನ್ನು ಸತ್ಯ ಮಾಡೋದೇ ಆರ್ ಎಸ್ ಎಸ್ ತರಬೇತಿ – ದಿನೇಶ್ ಗುಂಡೂರಾವ್

RSS Traniing

Hindu neighbor gifts plot of land

Hindu neighbour gifts land to Muslim journalist

RSS Traniing: ಪ್ರಾಸಿಕ್ಯೂಶನ್(Prosecution) ವಿಚಾರ ನ್ಯಾಯಾಲಯ(Court) ತೀರ್ಮಾನಿಸುತ್ತದೆ. ಆದರೆ, ರಾಜ್ಯಪಾಲರ (Governor) ಪಕ್ಷಪಾತ ನಡೆ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಮಂಗಳೂರಲ್ಲಿ ಪ್ರತಿಕ್ರಿಯಿಸಿದರು. ಮೈಸೂರು ಮೂಡಾ ಹಗರಣಕ್ಕೆ(MUDA Scam) ಸಂಬಂಧಿಸಿ ನ್ಯಾಯಾಲಯವು ಆದೇಶ ಕಾಯ್ದಿರಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಯಾವುದೇ ಅಧಿಕಾರ ದುರುಪಯೋಗ ಮಾಡಿಲ್ಲ, ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದರು.

ಬಿಜೆಪಿಯವರು ಸುಮ್ಮನೆ ಬೊಬ್ಬೆ ಹಾಕಿ ಸುಳ್ಳನ್ನು ಸತ್ಯ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಸುಳ್ಳನ್ನು ಸತ್ಯ ಮಾಡುವುದೇ ಆರ್.ಎಸ್.ಎಸ್ ನ ತರಬೇತಿಯಾಗಿದೆ. ಆರ್ ಎಸ್ ಎಸ್ ಇದನ್ನೇ ತರಬೇತಿ ಕೊಡುವುದು, ಯಾವ ರೀತಿ ಪ್ರಚೋದನೆ ಮಾಡಬೇಕು, ಗಲಾಟೆ ಎಬ್ಬಿಸಬೇಕು, ದಂಗೆ ಮಾಡಬೇಕೆಂದು ತರಬೇತಿ ನೀಡುತ್ತಾರೆ ಎಂದು ಟೀಕಿಸಿದರು. ಬಿಜೆಪಿ, ಸಂಘ ಪರಿವಾರದಲ್ಲಿ ಇದಕ್ಕೆಂದೇ ತರಬೇತಿ ಇರುತ್ತದೆ. ಅದನ್ನೇ ಇಲ್ಲಿ ಸಹ ಮಾಡಲು ಹೊರಟಿದ್ದಾರೆ, ನಮಗೆ ಯಾವುದೇ ಭಯ ಇಲ್ಲ ಎಂದು ಹೇಳಿದರು.