Home News RSS: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸದ್ದಿಲ್ಲದೇ ಮಾನದಂಡ ರೂಪಿಸಿದ RSS !! ಏನೇನಿದೆ ಗೊತ್ತಾ?

RSS: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸದ್ದಿಲ್ಲದೇ ಮಾನದಂಡ ರೂಪಿಸಿದ RSS !! ಏನೇನಿದೆ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

RSS: ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಭಾರೀ ಚರ್ಚೆ ನಡೆಯುತ್ತಲೇ ಇದೆ. ಜುಲೈ ಮೊದಲ ವಾರದಲ್ಲಿ ಅಧ್ಯಕ್ಷರ ಹೆಸರು ರಿವಿಲ್‌ ಆಗುವ ಸಾಧ್ಯತೆ ಇದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಆದರೆ ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಆರ್ ಎಸ್ ಎಸ್ ಸದ್ದಿಲ್ಲದೆ ಮಾನದಂಡಗಳನ್ನು ರೂಪಿಸಿದೆ ಎನ್ನಲಾಗುತ್ತಿದೆ.

ಹೌದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ (BJP national president) ಯಾರ ಹೆಸರನ್ನು ಫೈನಲ್ ಮಾಡಬೇಕು ಎನ್ನುವ ಗೊಂದಲ ಬಿಜೆಪಿಯಲ್ಲಿ ಪಾಳಯದಲ್ಲಿ ಮುಂದುವರಿದಿದೆ. ಇದರ ಎಡೆಯಲ್ಲಿ ಆರ್ ಎಸ್ ಎಸ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಮಾನದಂಡಗಳನ್ನು ರೂಪಿಸಿದೆ.

ಆರ್‌ಎಸ್‌ಎಸ್‌ ನೀಡಿರುವ ಕೆಲವೊಂದು ಮಾನದಂಡಗಳ ಪ್ರಕಾರ ಬಿಜೆಪಿ ರಾಷ್ಟಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ವ್ಯಕ್ತಿ ತಳಮಟ್ಟದಿಂದ ಪಕ್ಷ ಸಂಘಟನೆ ಮೂಲಕ ಬೆಳೆದು ಬಂದವನಾಗಿರಬೇಕು. ಜನ ಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗರಬೇಕು. ಮುಖ್ಯವಾಗಿ ನಿಗಧಿತ ವಯಸ್ಸಿಗಿಂತ ಆತನ ವಯಸ್ಸು ಕಡಿಮೆ ಇರಬಾರದು ಎಂಬುದು ಸಂಘ ನೀಡಿರುವ ಮಾನದಂಡಗಳ ಪಟ್ಟಿಯಲ್ಲಿರುವ ಕೆಲವೊಂದು ಪ್ರಮುಖ ಅಂಶಗಳು. ಆ ಮೂಲಕ ಆರ್‌ಎಸ್‌ಎಸ್‌ ಕೇವಲ ಕೇಂದ್ರೀಕರಿತ ನಾಯಕತ್ವದ ಬಗ್ಗೆ ಒಲವು ಹೊಂದಿಲ್ಲ. ಬದಲಾಗಿ ಹೈಕಮಾಂಡ್‌ ಮತ್ತು ತಳಮಟ್ಟದ ನಾಯಕರ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುವ ನಾಯಕರು ಬೇಕಾಗಿದ್ದಾರೆ. ಅಲ್ಲದೇ ಕಾರ್ಯಕರ್ತರನ್ನು ಸಂಘಟಿಸುವ ಶಕ್ತಿ ಅವಲ್ಲಿರಬೇಕು ಎಂಬುದು ಆರ್‌ ಎಸ್‌ಎಸ್‌ ಚಿಂತನೆ ಎನ್ನಲಾಗಿದೆ.

ಇನ್ನು ಬಿಜೆಪಿಯ ಮುಂದಿನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಾನು ಯಾವುದೇ ಹೆಸರನ್ನು ಆರ್‌ಎಸ್‌ಎಸ್‌ ಸೂಚಿಸಿಲ್ಲ ಎಂದು ಹೇಳಿಕೊಂಡರೂ, ಈ ಪ್ರಕ್ರಿಯೆಯಲ್ಲಿ ಆರ್‌ಎಸ್‌ಎಸ್‌ ಅಭಿಪ್ರಾಯವನ್ನು ಬಿಜೆಪಿ ಬಹಳ ಗಂಭೀರವಾಗಿ ಪರಿಗಣಿಸುತ್ತದೆ.

ಇದನ್ನೂ ಓದಿ: Police: ಈ ಪೊಲೀಸರು ಮಾಡಿದ್ರು ಜನ ಮೆಚ್ಚುವ ಕೆಲಸ – ಮಗುವಿನ ಜೀವ ಉಳಿಸಲು ₹3.3 ಕೋಟಿ ಸಂಗ್ರಹ