Home News Santosh Hegde : RSS ನಿಷೇಧ ಸಂವಿಧಾನ ವಿರೋಧಿ ಕ್ರಮ – ನ್ಯಾ ಸಂತೋಷ್ ಹೆಗಡೆ...

Santosh Hegde : RSS ನಿಷೇಧ ಸಂವಿಧಾನ ವಿರೋಧಿ ಕ್ರಮ – ನ್ಯಾ ಸಂತೋಷ್ ಹೆಗಡೆ ಅಭಿಪ್ರಾಯ

Hindu neighbor gifts plot of land

Hindu neighbour gifts land to Muslim journalist

Santosh Hegde: ಯಾವುದೇ ಸಂಘಟನೆಯನ್ನು ನಿಷೇಧಿಸುವುದು ಸಂವಿಧಾನ ವಿರೋಧಿ ಕ್ರಮ. ಆರ್‌ಎಸ್‌ಎಸ್‌ ನಿಷೇಧಿಸುವ ಕಾಂಗ್ರೆಸ್ ಪ್ರಸ್ತಾಪವು ದೇಶದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ,’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ ಅವರು ಅಭಿಪ್ರಾಯಪಟ್ಟಿದ್ದಾರೆ.

 

ಹೌದು, ರಾಜ್ಯದಲ್ಲಿ ಆರ್‌ಎಸ್‌ಎಸ್‌ ನಿಷೇಧಿಸಲು ಕಾಂಗ್ರೆಸ್ ಪಕ್ಷ ಹೊರಟಿದೆ. ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸುತ್ತಾರೆ. ಆಗ ಅವರ ಆಟ ಶುರುವಾಗುತ್ತದೆ. ಒಟ್ಟಿನಲ್ಲಿ ನಿಷೇಧಿಸುವ ಆಟ ಜೋರಾಗಿದೆ ಎಂದರು.

 ಈ ಕುರಿತಾಗಿ ಮಾತನಾಡಿದ ಅವರು ‘ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಂಘ ಕಟ್ಟುವ, ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ನೀಡಿದೆ. ಆರ್‌ಎಸ್‌ಎಸ್‌ ಇರಲಿ, ಬೇರೆ ಯಾವುದೇ ಸಂಘಟನೆಯೇ ಇರಲಿ, ಅದನ್ನು ನಿಷೇಧಿಸಲು ಹೊರಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ,’ ಎಂದು ಸ್ಪಷ್ಟಪಡಿಸಿದರು. ‘ಒಂದು ವೇಳೆ ಸಂಘಟನೆಯೊಂದು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರೆ, ಆ ವ್ಯಕ್ತಿಗಳ ಅಥವಾ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೇ ಹೊರತು, ಇಡೀ ಸಂಘಟನೆಯನ್ನೇ ನಿಷೇಧಿಸುವುದು ಸರಿಯಲ್ಲ,’ ಎಂದು ಅವರು ವಿವರಿಸಿದರು.