Home News GBA: ಬೀದಿ ಬದಿ ಕಸ ಎಸೆವವರ ವಿಡಿಯೋ ಮಾಡಿ ಕಳಿಸಿದವರಿಗೆ 250 ರೂ ಬಹುಮಾನ –...

GBA: ಬೀದಿ ಬದಿ ಕಸ ಎಸೆವವರ ವಿಡಿಯೋ ಮಾಡಿ ಕಳಿಸಿದವರಿಗೆ 250 ರೂ ಬಹುಮಾನ – ಗ್ರೇಟರ್ ಬೆಂಗಳೂರು ಪ್ರಾಧಿಕಾರ ಘೋಷಣೆ

Hindu neighbor gifts plot of land

Hindu neighbour gifts land to Muslim journalist

GBA: ಮಹಾನಗರವಾದ ಬೆಂಗಳೂರಿನಲ್ಲಿ ಕಸದ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಎದುರಾಗಿದೆ. ಇದರೊಂದಿಗೆ ಬೀದಿ ಬದಿಯಲ್ಲಿ ಕಂಡ ಕಂಡಲ್ಲಿ ಕಸ ಎಸೆಯುವವರ ಹಾವಳಿ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಸ ಮಾಸ್ಟರ್ ಪ್ಲಾನ್ ಹೆಣೆದಿದೆ.

ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರಿಗೆ ಕಡಿವಾಣ ಹಾಕುವ ಸಲುವಾಗಿ, ಕಸ ಎಸೆಯುವವರ ವಿಡಿಯೋಗಳನ್ನು ನೀಡಿದವರಿಗೆ ರೂ.250 ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಬಿಎಸ್‌ಡಬ್ಲ್ಯೂಎಂಎಲ್‌ನ ಮೀಸಲಾದ ವಾಟ್ಸಾಪ್ ಸಂಖ್ಯೆ – 9448197197 ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವವರಿಗೆ ರೂ.250 ಬಹುಮಾನ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಂದ ಹಾಗೆ ಈಗಾಗಲೇ ನಾವು ಈ ಕುರಿತ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಬಹುದು. ಬೀದಿ ಬದಿಯಲ್ಲಿ ಕಸ ಎಸೆಯುವವರನ್ನು ಗುರುತಿಸಿ ಪ್ರಾಧಿಕಾರವು ಅವರ ಮನೆ ಮುಂದೆ ತೆರಳಿ ಕಸವನ್ನು ಸುರಿಸುತ್ತಿದೆ. ಸೋ ಅನೇಕರು ಬೀದಿಬದಿಯಲ್ಲಿ ಕಸ ಎಸೆಯಲು ಹೆದರುತ್ತಿದ್ದಾರೆ. ಇದು ಬೀದಿ ಬದಿ ಕಸ ಎಸೆಯುವವರ ಹಾವಳಿಯನ್ನು ತಡೆಯುವ ಒಂದು ಮಹತ್ವದ ಕ್ರಮವಾಗಿದೆ.