Home News Ananthkumar Hegde: ನೆಲಮಂಗಲದಲ್ಲಿ ಗಲಾಟೆ, ಹಲ್ಲೆ ಆರೋಪ: ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ, ಗನ್‌ಮ್ಯಾನ್‌,...

Ananthkumar Hegde: ನೆಲಮಂಗಲದಲ್ಲಿ ಗಲಾಟೆ, ಹಲ್ಲೆ ಆರೋಪ: ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ, ಗನ್‌ಮ್ಯಾನ್‌, ಚಾಲಕನ ವಿರುದ್ಧ ಎಫ್‌ಐಆರ್‌

Hindu neighbor gifts plot of land

Hindu neighbour gifts land to Muslim journalist

Ananthkumar Hegde: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್‌ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ಮಾಡಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ, ಅವರ ಕಾರು ಚಾಲಕ, ಗನ್‌ಮ್ಯಾನ್‌ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಘಟನೆ ವಿವರ:

ಅನಂತ್‌ಕುಮಾರ್‌ ಹೆಗಡೆ ಅವರು ತೆರಳುತ್ತಿದ್ದ ಕಾರನ್ನು ಓವರ್‌ ಟೇಕ್‌ ಮಾಡಲಾಗಿದೆ ಎನ್ನುವ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಅನಂತ್‌ ಕುಮಾರ್‌ ಹೆಗಡೆ ಪುತ್ರ ಅಶುತೋಷ್‌, ಚಾಲಕ, ಗನ್‌ಮ್ಯಾನ್‌ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪವಿದೆ.

ಇನ್ನೋವಾ ಕಾರಿನಲ್ಲಿ ಸಲ್ಮಾನ್‌, ಸೈಫ್‌, ಇಲಿಯಾಜ್‌ ಖಾನ್‌, ಉನ್ನೀಸಾ ಎನ್ನುವವರ ಮೇಲೆ ಹಲ್ಲೆ ಮಾಡಲಾಗಿದೆ. ದಾಬಸ್‌ಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ನೆಲಮಂಗಲ ಗ್ರಾಮಾಂತರ ಠಾಣೆಯ ಡಿವೈಎಸ್‌ಪಿ ಕಚೇರಿಯಲ್ಲಿ ಅನಂತ್‌ಕುಮಾರ್‌ ಹೆಗಡೆ ಅವರನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಅವರು, ಓವರ್‌ಟೇಕ್‌ ವೇಳೆ ಖಾರಿಗೆ ಮತ್ತೊಂದು ಕಾರು ಟಚ್‌ ಆಗಿದ್ದಕ್ಕೆ ಗಲಾಟೆ ನಡೆದಿದೆ ಎಂದು ಹೇಳಿದ್ದು, ತಾವು ಕಾರಿನಲ್ಲಿದ್ದುದ್ದು, ಹಲ್ಲೆ ಮಾಡಿಲ್ಲ ಎಂದು ಹೇಳಿದ್ದಾರೆ.

ಘಟನೆ ನಡೆದ ಮಾಹಿತಿ ಎಲ್ಲೆಡೆ ಗೊತ್ತಾಗುತ್ತಿದ್ದಂತೆ ಪೊಲೀಸ್‌ ಠಾಣೆ ಬಳಿ ರಾತ್ರಿ ಜನ ಸೇರಿದ್ದು, ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು.

ಹಲ್ಲೆಗೊಳಗಾಗಿದ್ದ ಸೈಫ್‌ ದಾಬಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಅನಂತ್‌ಕುಮಾರ್‌ ಹೆಗಡೆ A1, ಗನ್‌ಮ್ಯಾನ್‌ ಶ್ರೀಧರ್‌ A2, ಚಾಲಕ ಮಹೇಶ್‌ A3 ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Shriranga Pattana: ಸರ್ಕಾರಿ ಜಮೀನನ್ನು ಮುಸ್ಲಿಮರ ಹೆಸರಿಗೆ ರಿಜಿಸ್ಟರ್ ಮಾಡಿದ್ರೆ ನೇಣು ಹಾಕಿ ಬಿಡ್ತೀನಿ – ಅಧಿಕಾರಿಗಳಿಗೆ ಕಾಂಗ್ರೆಸ್ ಶಾಸಕ ವಾರ್ನಿಂಗ್