Home News Job: 500 ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!!

Job: 500 ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!!

Hindu neighbor gifts plot of land

Hindu neighbour gifts land to Muslim journalist

 

Job: ಉದ್ಯೋಗವನ್ನು ಅರಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೀಗ ಸಿಹಿ ಸುದ್ದಿ ಒಂದು ದೊರೆತಿದ್ದು ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಐನೂರು ಹುದ್ದೆಗಳ ಬರ್ತಿದೆ ಇದೀಗ ಸರ್ಕಾರ ಅರ್ಜಿಯನ್ನು ಆಹ್ವಾನ ಮಾಡಿದೆ.

 

ಹೌದು, ಕಂದಾಯ ಇಲಾಖೆಯಲ್ಲಿ 500 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇವೆ. ಈ  ಗ್ರಾಮ ಲೆಕ್ಕಿಗ (Village Accountant) ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕನಿಷ್ಠ ವಿದ್ಯಾರ್ಹತೆ ಮುಗಿಸಿದವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗ ನೇಮಕಾತಿ ಹೆಚ್ಚಿನ ವಿವರ, ವಯೋಮಿತಿ, ಅರ್ಹತೆ, ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ.

 

ವಿದ್ಯಾರ್ಹತೆ:

ಕಂದಾಯ ಇಲಾಖೆಯ ನೇಮಕಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣವಾಗಿರಬೇಕು. ಈ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಎಂದು ಅಧಿಸೂಚನೆಯಲ್ಲಿ ಇಲಾಖೆ ತಿಳಿಸಿದೆ.

 

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವಯಸ್ಸು ಮತ್ತು ಗರಿಷ್ಠ ವಯಸ್ಸು 38 ಇರಬೇಕು. ಜಾತಿ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳ ವಯೋಮಿತಿಯಲ್ಲಿ ಸಡಿಲಿಕೆ ಸಿಗುತ್ತದೆ. 2ಎ 2ಬಿ 3ಎ 3ಬಿ ವರ್ಗ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಂಡ ಅಭ್ಯರ್ಥಿಗಳಿಗೆ 5 ವರ್ಷ ವಯೋ ಸಡಿಲಿಕೆ ಸಿಗಲಿದೆ ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

 

 ಪರೀಕ್ಷಾ ವಿಧಾನ:

ಅರ್ಜಿ ಸಲ್ಲಿಸಿದ ಬಳಿಕದ ಅಭ್ಯರ್ಥಿಗಳಿಗೆ 200 ಅಂಕಗಳ ಲಿಖಿತ ಎರಡು ಪರೀಕ್ಷೆ ಇರುತ್ತದೆ. ಇದರೊಂದಿಗೆ ಒಂದು ಕಡ್ಡಾಯ ಕನ್ನಡ ಪತ್ರಿಕೆ ಸಹ ಇರುತ್ತದೆ. ಋಣಾತ್ಮಕ ಅಂಕಗಳು ಇರುತವೆ.

 

ಅರ್ಜಿ ಸಲ್ಲಿಕೆ ವಿಧಾನಗಳು ತಿಳಿಯಿರಿ

* ಅಭ್ಯರ್ಥಿಗಳು ಮೊದಲು ಕಂದಾಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ https://kandaya.karnataka.gov.in/en ಗೆ ಭೇಟಿ ನೀಡಬೇಕು.

* ಅಲ್ಲಿ ತೆರೆದುಕೊಳ್ಳುವ ಪರದೆಯಲ್ಲಿ ನಿಮಗೆ ಅಗತ್ಯವಾದ Karnataka Revenue Department ವಿಭಾಗ ಆಯ್ಕೆ ಮಾಡಿಕೊಳ್ಳಬೇಕು.

* ಅಲ್ಲಿ ಸಿಗುವ ಅಧಿಸೂಚನೆ ಪರಿಶೀಲಿಸಬೇಕು. ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

* ನಂತರ ಆನ್ಲೈನ್ ಲಿಂಕ್ ಮೂಲಕ ಅರ್ಜಿ ನಮೂನೆ ಕ್ಲಿಕ್ ಮಾಡಿ.

* ಅಲ್ಲಿ ಕೇಳಲಾಗುವ ಎಲ್ಲ ಅಗತ್ಯ ವಿವರ ನಮೂದಿಸಿ

* ಶುಲ್ಕ ಪಾವತಿ ಮಾಡುವ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

* ಭವಿಷ್ಯದ ಉಪಯೋಗಕ್ಕಾಗಿ ಅರ್ಜಿಯ ಒಂದು ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.