Home News Govinda Karajola’s statement: ಕಾಂಗ್ರೆಸ್ ನ 40 ಶಾಸಕರಿಂದ ರಾಜಿನಾಮೆ?! ರಾಜ್ಯದ ಬೊಕ್ಕಸದಲ್ಲಿ ದುಡ್ಡಿಲ್ಲದ್ದೇ ಕಾರಣ...

Govinda Karajola’s statement: ಕಾಂಗ್ರೆಸ್ ನ 40 ಶಾಸಕರಿಂದ ರಾಜಿನಾಮೆ?! ರಾಜ್ಯದ ಬೊಕ್ಕಸದಲ್ಲಿ ದುಡ್ಡಿಲ್ಲದ್ದೇ ಕಾರಣ ?!

Govinda Karajola's statement

Hindu neighbor gifts plot of land

Hindu neighbour gifts land to Muslim journalist

Govinda Karajola’s statement: ಕಾಂಗ್ರೆಸ್‌ನ 40 ಜನ ಶಾಸಕರು ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ’ ಎಂದು ಸಂಸದ, ಬಿಜೆಪಿ ನಾಯಕ ಗೋವಿಂದ ಕಾರಜೋಳ ಹೇಳಿಕೆ(Govinda Karajola’s statement) ನೀಡಿದ್ದು ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಹೌದು, ಕಾಂಗ್ರೆಸ್ ಸರ್ಕಾರವು(Congress Government) ಯಾವುದೇ ವಿವೇಚನೆ, ಲೆಕ್ಕಾಚಾರ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ನಂತರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೂ ಅನುದಾನವಿಲ್ಲ. ಈ ಹಿನ್ನೆಲೆಯಲ್ಲಿ ಬೇಸತ್ತು ಕಾಂಗ್ರೆಸ್‌ನ 40 ಜನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ’ ಎಂದು ಕಾರಜೋಳ ಅವರು ತಿಳಿಸಿದ್ದಾರೆ.

ಕೂದಲು ಬಿಳಿಯಾಗಿದೆ ಅನ್ನೋರಿಗೆ ಸಿಂಪಲ್ ಸೊಲ್ಯೂಷನ್ ಇಲ್ಲಿದೆ!

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ (C S Nadagowda)ಅವರು ಈಚೆಗೆ ತಮ್ಮ ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ದಿವಾಳಿ ಆಗುವ ಹಂತ ತಲುಪಿದೆ. ಕ್ಷೇತ್ರ ಅಭಿವೃದ್ಧಿ ಮಾಡದಿದ್ದರೆ ಮತ ಹಾಕಿದ ಜನ ಬಿಡುವುದಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಶಾಸಕರು ರಾಜೀನಾಮೆ ಮಾರ್ಗ ಹಿಡಿದಿದ್ದಾರೆ’ ಎಂದು ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜಿನಾಮೆ ಕೊಡುತ್ತೇನೆಂದ ಕಾಂಗ್ರೆಸ್ ಶಾಸಕ:
ಕೆಲವು ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ (C S Nadagowda)ಅವರು ಈಚೆಗೆ ತಮ್ಮ ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿ ಸದ್ಯದಲ್ಲೇ ಅನುದಾನ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ, ಮಂಗಳೂರು ಪದಾಧಿಕಾರಿಗಳಿಂದ ನೂತನ ಸಂಸದ ಕ್ಯಾ. ಬ್ರಿಜೇಶ್ ಚೌಟರಿಗೆ ಅಭಿನಂದನೆ ಸಲ್ಲಿಕೆ