Home News Chitradurga: ‘ದರ್ಶನ್ ಮನೆಗೆ ಬಂದ್ರೆ ಊಟ ಹಾಕ್ತೀವಿ, ನಮಗೇನು ದ್ವೇಷ ಇಲ್ಲ’ ರೇಣುಕಾ ಸ್ವಾಮಿ...

Chitradurga: ‘ದರ್ಶನ್ ಮನೆಗೆ ಬಂದ್ರೆ ಊಟ ಹಾಕ್ತೀವಿ, ನಮಗೇನು ದ್ವೇಷ ಇಲ್ಲ’ ರೇಣುಕಾ ಸ್ವಾಮಿ ತಂದೆ !!

Hindu neighbor gifts plot of land

Hindu neighbour gifts land to Muslim journalist

Chitradurga: ‘ದರ್ಶನ್ ಬಗ್ಗೆ ನಮಗೇನೂ ದ್ವೇಷ ಇಲ್ಲ. ಅವರು ನಮ್ಮ ಮನೆಗೆ ಬಂದರೆ ಊಟ ಹಾಕಿ ಉಪಚಾರ ಮಾಡುತ್ತೇವೆ’ ಹೀಗೆ ಹೇಳಿದ್ದು ಯಾರು ಗೊತ್ತಾ? ಬೇರಾರು ಅಲ್ಲ, ದರ್ಶನ್ ನಿಂದ ಹತ್ಯೆಗೊಳಗಾದ ರೇಣುಕಾ ಸ್ವಾಮಿ ತಂದೆ!!

ಹೌದು, ನಟ ದರ್ಶನ್ ರೇಣುಕಾಸ್ವಾಮಿ(Renukaswamy) ಮನೆಗೆ ಭೇಟಿ ನೀಡುವ ಕುರಿತು, ಕ್ಷಮೆ ಕೇಳುವ ಕುರಿತು ರೇಣುಕಾ ಸ್ವಾಮಿ ತಂದೆ ಶಿವನಗೌಡರ್(Shivanagoudar) ಹೇಳಿದ ಹೇಳಿಕೆ ಒಂದೆಡೆ ಮನವೀಯತೆಗೆ, ಕರುಣೆಗೆ ಒಂದು ನಿದರ್ಶನವಾದರೆ ಮತ್ತೊಂದೆಡೆ ಅಚ್ಚರಿ ಹುಟ್ಟಿಸುವಂತಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ದರ್ಶನ್(Darshan) ನಮ್ಮ ಮನೆಗೆ ಬಂದರೂ ನಾವು ದ್ವೇಷ ಮಾಡಲ್ಲ. ನಾವು ಯಾರ ಬಗ್ಗೆಯೂ ಕಾಮೆಂಟ್ ಮಾಡಲ್ಲ. ಎಲ್ಲರ ಬಗ್ಗೆ ಒಳ್ಳೆಯ ಭಾವನೆ ಇದೆ. ಕಾನೂನು ಪ್ರಕಾರ ಏನು ನಡೆಯುತ್ತದೆಯೋ ಅದು ನಡೆಯಲಿ. ನಾವು ಜಂಗಮರು, ಯಾರನ್ನೂ ನಾವು ದ್ವೇಷ ಮಾಡಲ್ಲ, ಅಸೂಯೆ ಪಡುವವರಲ್ಲ. ದರ್ಶನ್ ನಮ್ಮ ಮನೆಗೆ ಬರುವುದಾದರೆ ಬರಲಿ, ಯಾರನ್ನೂ ಬೇಡ ಅನ್ನುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ನಾವು ಎಲ್ಲರಿಗೂ ಗೌರವ ಕೊಡುತ್ತೇವೆ, ಪ್ರೀತಿ ವಿಶ್ವಾಸದಿಂದ ಇರುತ್ತೇವೆ. ನಮಗೆ ಆಗಿರುವ ಅನ್ಯಾಯಕ್ಕೆ ಕಾನೂನು ಏನೂ ನಡೆಯುತ್ತದೆ ನಡೆಯಲಿ. ಯಾರೇ ನಮ್ಮ ಮನೆಗ ಬಂದರೂ ಬರಲಿ, ನಮ್ಮ ಅಭ್ಯಂತರ ಇಲ್ಲ. ಮನೆ ಬಾಗಿಲಿಗೆ ದರ್ಶನ್ ಬಂದರೆ ಬನ್ನಿ ಎಂದು ಕರೆಯುತ್ತೇವೆ. ಆ ಪ್ರಸಂಗ ಬಂದಾಗ ನಾವು ಮಾತನಾಡುತ್ತೇವೆ ಎಂದಿದ್ದಾರೆ. ಅಲ್ಲದೆ ದರ್ಶನ್ ಪತ್ನಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ವಿಚಾರದ ಕುರಿತು ಸಹ ಮಾತನಾಡಿದ ಅವರು ದರ್ಶನ್ ಪತ್ನಿಯುಂಟು, ಮಂತ್ರಿಯುಂಟು ನಮಗ್ಯಾಕೆ ಆ ವಿಚಾರ? ಎಂದು ಹೇಳಿದ್ದಾರೆ.