Home News Sharda Sinha: ಖ್ಯಾತ ಗಾಯಕಿ, ಪದ್ಮಭೂಷಣ ಪುರಸ್ಕೃತೆ ನಿಧನ!

Sharda Sinha: ಖ್ಯಾತ ಗಾಯಕಿ, ಪದ್ಮಭೂಷಣ ಪುರಸ್ಕೃತೆ ನಿಧನ!

Hindu neighbor gifts plot of land

Hindu neighbour gifts land to Muslim journalist

Sharda Sinha: ಜನಪ್ರಿಯ ಜಾನಪದ ಗಾಯಕಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಶಾರದಾ ಸಿನ್ಹಾ (Sharda Sinha) ಅವರು ಕ್ಯಾನ್ಸರ್‌ ಪರಿಣಾಮ ಮಂಗಳವಾರ ಸಂಜೆ ನಿಧನರಾಗಿದ್ದಾರೆ.

2017 ರಲ್ಲಿ ಅವರಿಗೆ ಮಲ್ಟಿಪಲ್ ಮೈಲೋಮಾ ದೃಢಪಟ್ಟಿತ್ತು. ಇದು ಮೂಳೆ ಮಜ್ಜೆಯ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕ್ಯಾನ್ಸರ್ ಆಗಿತ್ತು. ಈ ಪರಿಣಾಮ 72 ವಯಸ್ಸಿನ ಖ್ಯಾತ ಗಾಯಕಿಯನ್ನು ಅನಾರೋಗ್ಯದ ಹಿನ್ನೆಲೆ ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಅ.25 ರಿಂದ ಆಸ್ಪತ್ರೆಯ ಆಂಕೊಲಾಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸಿನ್ಹಾ ಅವರನ್ನು ವೆಂಟಿಲೇಟರ್‌ನಲ್ಲಿರಿಸಲಾಗಿತ್ತು. ಇದೀಗ ಅವರು ನಿನ್ನೆ ಸಂಜೆ ಮರಣ ಹೊಂದಿದ್ದಾರೆ.

ಶಾರದಾ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.