Home News Jio Cheapest Plan: ಜಿಯೋ ಬಿಡುಗಡೆ ಮಾಡಿದೆ ಹೊಸ ಪ್ಲ್ಯಾನ್ | 90 ದಿನಗಳ ವ್ಯಾಲಿಡಿಟಿ...

Jio Cheapest Plan: ಜಿಯೋ ಬಿಡುಗಡೆ ಮಾಡಿದೆ ಹೊಸ ಪ್ಲ್ಯಾನ್ | 90 ದಿನಗಳ ವ್ಯಾಲಿಡಿಟಿ ಇರುವ ಅಗ್ಗದ 5ಜಿ ಪ್ಲಾನ್ ಬಿಡುಗಡೆ ಮಾಡಿದ ಜಿಯೋ!

Hindu neighbor gifts plot of land

Hindu neighbour gifts land to Muslim journalist

ಭಾರತದ ಟೆಲಿಕಾಂ ಕಂಪನಿಗಳು ಹಲವಾರು ಇವೆ. ಅವುಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಇತರ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ ಅಂದರೆ ತಪ್ಪಾಗಲಾರದು .

ಪ್ರಸ್ತುತ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿರುವ ನಮಗೆ ತಿಳಿದಿರುವ ವಿಚಾರ. ಹೌದು ಜನರಿಗಾಗಿ ರಿಲಯನ್ಸ್ ಜಿಯೋ ಹೊಸ ಹೊಸ ಆಫರ್ಗಳನ್ನು ನೀಡುತ್ತಲೇ ಇದೆ. ಸದ್ಯ
ರಿಲಯನ್ಸ್ ಜಿಯೋ 90 ದಿನಗಳ ಮಾನ್ಯತೆ ಇರುವ ಜಬರ್ದಸ್ತ್ ಪ್ಲಾನ್ ಬಿಡುಗಡೆ ಮಾಡಿದೆ. ಇದು ಕಡಿಮೆ ವೆಚ್ಚದಲ್ಲಿ ಹೆಚ್ಚು ದಿನಗಳ ಮಾನ್ಯತೆಯನ್ನು ನಿಮಗೆ ನೀಡುತ್ತದೆ. ಈ ಯೋಜನೆಯಲ್ಲಿ ನೀವು ಮೂರು ತಿಂಗಳುಗಳ ವರಗೆ ಕಾರ್ಯ ನಿರ್ವಹಿಸಬಹುದು.

ಪ್ರಸ್ತುತ ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಪರಿಚಯಿಸಿರುವ ಯೋಜನೆಯ ಬೆಲೆ 749 ರೂ. ಜಿಯೋ ಕಂಪನಿಯ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಅನಿಯಮಿತ ಕರೆ ಮತ್ತು ಹೆಚ್ಚಿನ ಡೇಟಾವನ್ನು ನೀಡಲಾಗುತ್ತದೆ. 90 ದಿನಗಳ ಮಾನ್ಯತೆಯೊಂದಿಗೆ, 2GB ದೈನಂದಿನ ಡೇಟಾದಂತೆ ನೀವು ಒಟ್ಟು 180GB ಡೇಟಾ ಪಡೆಯಬಹುದು. ಯೋಜನೆಯಲ್ಲಿ ಅನಿಯಮಿತ ಡೇಟಾ ಕೊಡುಗೆಯೂ ಲಭ್ಯವಿದೆ, ಆದರೆ ವೇಗ 64 Kbps ಗೆ ಇಳಿಕೆಯಾಗುತ್ತದೆ. ಇದಲ್ಲದೇ, ಅನಿಯಮಿತ ಕರೆ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್‌ಗಳ ಉಚಿತ ಪ್ರಯೋಜನಗಳು ಈ ಯೋಜನೆಯಲ್ಲಿ ಲಭ್ಯವಿದೆ.

ಈ ಯೋಜನೆಯಲ್ಲಿ 5G ಲಭ್ಯವಿರುತ್ತದೆ
ನೀವು ಜಿಯೋ 5G ಇರುವ ನಗರದಲ್ಲಿದ್ದರೆ, ಕಂಪನಿಯು 5G ವೆಲ್ಕಮ್ ಆಫರ್ ಅಡಿಯಲ್ಲಿ ಅನಿಯಮಿತ 5G ಡೇಟಾವನ್ನು ಸಹ ನೀಡುತ್ತಿದೆ. ನೀವು 5G ಫೋನ್ ಹೊಂದಿದ್ದರೆ ಮತ್ತು Jio 5G ಗಾಗಿ ಆಹ್ವಾನವನ್ನು ಸ್ವೀಕರಿಸಿದ್ದರೆ, ನೀವು ಅದನ್ನು ಸುಲಭವಾಗಿ ಬಳಸಬಹುದು.

ಅದಲ್ಲದೆ ಜಿಯೋ ಇದೇ ರೀತಿಯ ಮತ್ತೊಂದು ಯೋಜನೆಯನ್ನು ಹೊಂದಿದೆ, ಇದರ ಬೆಲೆ 719 ರೂ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಮತ್ತು ಇದರಲ್ಲಿ ನಿಮಗೆ ಒಟ್ಟು 168 ಜಿಬಿ ಡೇಟಾವನ್ನು ನೀಡಲಾಗುತ್ತಿದೆ.ಇದಲ್ಲದೇ ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯವೂ ಇದೆ.