Home News ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ಗೆ ರೆಡ್‌ ಸಿಗ್ನಲ್‌

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ಗೆ ರೆಡ್‌ ಸಿಗ್ನಲ್‌

G Parameshwar
Image source: Daijiworld

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಆಡಿಸಲು ಅನುಮತಿಯನ್ನು ನಿರಾಕರಿಸಿರುವ ಸರಕಾರದ ಕ್ರಮವನ್ನು ಗೃಹ ಸಚಿವ ಪರಮೇಶ್ವರ್‌ ಸಮರ್ಥನೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನ್ಯಾ.ಕುನ್ಹಾ ವರದಿಯ ಯಾವ ಶಿಫಾರಸ್ಸನ್ನೂ ಕೆಎಸ್‌ಸಿಎನವರು ಅಳವಡಿಕೆ ಮಾಡಿರಲಿಲ್ಲ. ಹೀಗಾಗಿ ಉನ್ನತ ಮಟ್ಟದ ಸಮಿತಿಯಿಂದ ಅನುಮತಿ ನಿರಾಕರಿಸಲಾಯ್ತು ಎಂದಿದ್ದಾರೆ.

ಕಾಲ್ತುಳಿತ ಘಟನೆ ಆದ ಮೇಲೆ ನ್ಯಾ.ಕುನ್ಹಾ ನೇತೃತ್ವದಲ್ಲಿ ಆಯೋಗ ರಚಿಸಿಲಾಗಿತ್ತು.‌ ಅವರು ಕೊಟ್ಟ 17 ಶಿಫಾರಸ್ಸುಗಳನ್ನು ಕೆಎಸ್‌ಸಿಎ ಅವರಿಗೆ ನೀಡಿದ್ದೆವು, ಅದಕ್ಕೆ ಅವರು ಸ್ಪಂದಿಸಬೇಕಿತ್ತು. ಆದರೆ ಅವರು ಇದುವರೆಗೂ ಏನೂ ಮಾಡಿದಂತೆ ಕಂಡುಬಂದಿಲ್ಲ. ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳಿರೋ ಸಮಿತಿಯವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಒಂದೂ ಶಿಫಾರಸ್ಸು ಕೂಡಾ ಅಲ್ಲಿ ಪೂರ್ತಿ ಮಾಡಿರಲಿಲ್ಲ. ಹಾಗಾಗಿ ಅನುಮತಿ ಕೊಡಲು ಸಾಧ್ಯವಾಗಿಲ್ಲ ಅಂತ ಸಮಿತಿ ನಿರ್ಧಾರ ಕೈಗೊಂಡಿದೆ. ನ್ಯಾ.ಕುನ್ಹಾ ಶಿಫಾರಸ್ಸುಗಳಂತೆ ಅವರು ಕ್ರಮ ಕೈಗೊಂಡರೆ ಅನುಮತಿ ಸಿಗಲಿದೆ ಅಂತ ತಿಳಿಸಿದ್ದಾರೆ.