Home News RBI Rules: RBIನ ಹೊಸ ನಿಯಮ! ಇನ್ಮುಂದೆ 500 ರೂಪಾಯಿ ನೋಟಿನಲಿ ಈ ಸೂಚನೆ...

RBI Rules: RBIನ ಹೊಸ ನಿಯಮ! ಇನ್ಮುಂದೆ 500 ರೂಪಾಯಿ ನೋಟಿನಲಿ ಈ ಸೂಚನೆ ಪಾಲಿಸಲೇಬೇಕು

Hindu neighbor gifts plot of land

Hindu neighbour gifts land to Muslim journalist

RBI Rules: ಇನ್ಮುಂದೆ 500 ರೂಪಾಯಿ ನೋಟಿನಲಿ ನಾಗರಿಕರು ಈ ಸೂಚನೆ ಪಾಲಿಸಲೇಬೇಕು. ಯಾಕೆಂದರ್ 500 ರೂಪಾಯಿ ನೋಟುಗಳಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚುತ್ತಿರುವ ಕಾರಣ ನಕಲಿ ನೋಟು ತಡೆಯಲು RBI ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನಾಗರೀಕರು ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

RBI ಪ್ರಕಾರ, 500 ರೂ. ನೋಟಿನಲ್ಲಿ ಹಲವು ಸುರಕ್ಷತಾ ವಿಧಗಳಿವೆ. ಮುಖ್ಯವಾಗಿ ಒಂದು ವಿಶೇಷ ಭದ್ರತಾ ದಾರ ಇದೆ. ಅಂದರೆ 500 ರೂ. ನೋಟನ್ನು ಓರೆಯಾಗಿ ಹಿಡಿದಾಗ, ಈ ದಾರದ ಬಣ್ಣ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ. 

ಇನ್ನು ಮಹಾತ್ಮ ಗಾಂಧೀಜಿಯವರ ವಾಟರ್‌ಮಾರ್ಕ್. 500 ರೂ. ನೋಟನ್ನು ಬೆಳಕಿಗೆ ಹಿಡಿದಾಗ ಇದು ಸ್ಪಷ್ಟವಾಗಿ ಕಾಣುತ್ತದೆ. ‘500 ‘ ಸಂಖ್ಯೆಯನ್ನು ವಿಶೇಷ ಶಾಯಿಯಿಂದ ಮುದ್ರಿಸಲಾಗಿದೆ. ನೋಟನ್ನು ಓರೆಯಾಗಿ ಹಿಡಿದಾಗ, ಸಂಖ್ಯೆಯ ಬಣ್ಣ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ. 

ಇನ್ನು ‘ಭಾರತ್’ ಮತ್ತು ‘ಇಂಡಿಯಾ’ ಪದಗಳನ್ನು ಸೂಕ್ಷ್ಮವಾಗಿ ಮುದ್ರಿಸಲಾಗಿದ್ದು, ಇದನ್ನು ಭೂತಗನ್ನಡಿಯಿಂದ ಮಾತ್ರ ನೋಡಬಹುದು. ನಕಲಿ ನೋಟುಗಳಲ್ಲಿ ಇದು ಇರುವುದಿಲ್ಲ ಅಥವಾ ಕಳಪೆ ಗುಣಮಟ್ಟದ್ದಾಗಿರುತ್ತದೆ.

ಮುಖ್ಯವಾಗಿ ಎಟಿಎಂನಿಂದ ಹಣ ಪಡೆಯುವಾಗಲೂ ಜಾಗರೂಕರಾಗಿರಿ. ಪಡೆದ ನೋಟುಗಳನ್ನು ಪರಿಶೀಲಿಸಿ ಮತ್ತು ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಏನಾದರೂ ಸಮಸ್ಯೆ ಇದ್ದರೆ, ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ.

ನಕಲಿ ನೋಟು ಸಿಕ್ಕರೆ ಅದನ್ನು ಇಟ್ಟುಕೊಳ್ಳಬೇಡಿ. ತಕ್ಷಣ ಹತ್ತಿರದ ಬ್ಯಾಂಕ್‌ಗೆ ಹೋಗಿ ತಿಳಿಸಿ. ನೋಟು ಎಲ್ಲಿಂದ ಸಿಕ್ಕಿತು, ಯಾವ ಸಂದರ್ಭದಲ್ಲಿ ಸಿಕ್ಕಿತು ಎಂಬ ಸಂಪೂರ್ಣ ಮಾಹಿತಿ ನೀಡಿ. ಅಗತ್ಯ ದಾಖಲೆಗಳನ್ನು ಸಲ್ಲಿಸಿ.