Home News RBI ನಿಂದ ಮತ್ತೊಂದು ಹೊಸ ನೋಟು ಬಿಡುಗಡೆ- ಅಧಿಕೃತ ಘೋಷಣೆ

RBI ನಿಂದ ಮತ್ತೊಂದು ಹೊಸ ನೋಟು ಬಿಡುಗಡೆ- ಅಧಿಕೃತ ಘೋಷಣೆ

Hindu neighbor gifts plot of land

Hindu neighbour gifts land to Muslim journalist

RBI: ಭಾರತೀಯ ರಿಸರ್ವ್ ಬ್ಯಾಂಕ್ 20 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಹೌದು, RBI: ಭಾರತೀಯ ರಿಸರ್ವ್ ಬ್ಯಾಂಕ್ (RBI) 20 ರೂಪಾಯಿ ನೋಟಿನ ಕುರಿತು ಬಿಗ್​ ಅಪ್ಡೇಟ್ ನೀಡಿದೆ. ಅದೇನೆಂದರೆ ಆರ್​ಬಿಐ ಮಾಡಿರುವ ಹೊಸ ಘೋಷಣೆಯಂತೆ, ಹೊಸದಾಗಿ ನೇಮಕಗೊಂಡ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿಯನ್ನು ಹೊಂದಿರುವ ಹೊಸ 20 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿದೆ.

ಮುಂಬರುವ ನೋಟುಗಳು ವಿನ್ಯಾಸ, ಬಣ್ಣ ಮತ್ತು ಭದ್ರತಾ ವೈಶಿಷ್ಟ್ಯಗಳಲ್ಲಿ 2019 ರಲ್ಲಿ ಮೊದಲು ಪರಿಚಯಿಸಲಾದ ₹20 ಬಿಲ್‌ಗಳಿಗೆ ಹೋಲುತ್ತವೆ. ಇದು CDM ಗಳು ಮತ್ತು ATM ಗಳಂತಹ ನಗದು ನಿರ್ವಹಣಾ ಯಂತ್ರಗಳಿಗೆ ಸುಗಮ ಪರಿವರ್ತನೆಯನ್ನು ಖಚಿತಪಡಿಸುತ್ತದೆ ಎಂದು RBI ಹೇಳಿದೆ.

ಅಂದಹಾಗೆ ಈಗಿರುವ ನೋಟಿನ ಮುಂದುವರಿಕೆಯಾಗಿ ಹೊಸ ನೋಟುಗಳು ಇರುತ್ತವೆ. ಹೆಚ್ಚಿನ ನೋಟುಗಳನ್ನು ಮಾರುಕಟ್ಟೆಗೆ ತಂದು ಹಣಕಾಸಿನ ವ್ಯವಸ್ಥೆಯ ನಿರಂತರ ಹರಿವನ್ನು ಖಚಿತಪಡಿಸಿಕೊಳ್ಳಲು ಮಾತ್ರ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಹಿಂದೆ ಬಿಡುಗಡೆಯಾದ ಎಲ್ಲಾ 20 ರೂ. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ ಎಂದು RBI ತಿಳಿಸಿದೆ.