Home News MicroFinance: ಮೈಕ್ರೋ ಫೈನಾನ್ಸ್ ಗಳಿಗೆ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ RBI !!

MicroFinance: ಮೈಕ್ರೋ ಫೈನಾನ್ಸ್ ಗಳಿಗೆ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ RBI !!

Hindu neighbor gifts plot of land

Hindu neighbour gifts land to Muslim journalist

Microfinance: ಮೈಕ್ರೋಫೈನಾನ್ಸ್ ಕಂಪನಿಗಳ (Microfinance) ಹಾವಳಿ ಹೆಚ್ಚಾಗಿದ್ದು ಕೆಲವು ಊರುಗಳಲ್ಲಿ ಜನರು ಮನೆಯನ್ನೇ ಬಿಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇವರ ಹಾವಳಿ ಅನೇಕ ಮುಗ್ಧ ಮನಸ್ಸುಗಳ ಪ್ರಾಣವನ್ನು ತೆಗೆದಿದೆ. ಎಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿದೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಸರ್ಕಾರವು ಮೈಕ್ರೋ ಫೈನಾನ್ಸ್ ಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ಇದರ ಬೆನ್ನಲ್ಲೇ ಆರ್ಬಿಐ ಕೂಡ ಮೈಕ್ರೋ ಫೈನಾನ್ಸ್ ಗಳಿಗೆ ಖಡಕ್ ಸೂಚನೆಯನ್ನು ನೀಡಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಾಗಿದ್ದರೆ ಆ ಮಾರ್ಗಸೂಚಿಗಳು ಏನೇನು?

 

ಆರ್‌ಬಿಐ ಮಾರ್ಗಸೂಚಿಗಳು

* ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನಹರಿಸಬೇಕು. ಮೈಕ್ರೋ ಫೈನಾನ್ಸ್ ಕಂಪನಿಗಳು ಕಾನೂನು ನಿಯಮಾನುಸಾರ ನಡೆದುಕೊಳ್ಳಬೇಕು. ದೌರ್ಜನ್ಯ ನಡೆಯುವುದು ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ.

 

* ಹೆಚ್ಚುವರಿ ಸಾಲ ನೀಡುವುದು. ಸಂಜೆ 5 ಗಂಟೆಯ ನಂತರ ಸಾಲ ವಸೂಲಾತಿ ಮಾಡಲು ಹೋಗಬಾರದು. ಸಾಲ ವಸೂಲಾತಿ ಮಾಡುವಾಗ ಹೆದರಿಸಬಾರದು. ಹೆದರಿಸುವುದು ಕಂಡುಬಂದಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಅವಕಾಶವಿದೆ.

 

• ದಬ್ಬಾಳಿಕೆ ಮಾಡಿ ಸಾಲ ವಸೂಲು ಮಾಡಬಾರದು. ಸಾಲ ಪಡೆಯುವವರಿಗೆ ಲೋನ್ ಶೀಟ್ ನೀಡಬೇಕು. ಅದು ಕಾನೂನು ಚೌಕಟ್ಟಿನಲ್ಲಿರಬೇಕು. ಆರ್‌ಬಿಐ ಮಾರ್ಗಸೂಚಿಯನ್ನು ದಪ್ಪ ಅಕ್ಷರದಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಿಸಿ ಅಳವಡಿಸಬೇಕು. ಸಾಲದ ಬಡ್ಡಿ ಬಗ್ಗೆ ಮಾಹಿತಿ ನೀಡಬೇಕು.

 

* ಸಾಲ ಪಡೆದು ಫೈನಾನ್ಸ್ ಕಂಪನಿಗಳ ವಿರುದ್ದ ತಿರುಗಿ ಬೀಳುವುದು ಕಂಡುಬಂದರೂ ಸಹ ಸಹಾಯವಾಣಿಗೆ ಕರೆ ಮಾಡಬಹುದು. ನೋಂದಣಿಯಾಗದ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ದ ಕಾರ್ಯಾಚರಣೆಯನ್ನು ನಡೆಸಬಹುದು.

 

* ಸಾರ್ವಜನಿಕರು ಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧಿತ ದೂರುಗಳ ಕುರಿತು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದು. ಒಬ್ಬರಿಗೆ ಒಂಬತ್ತು ಕಂಪನಿಗಳು ಸಾಲ ನೀಡಿರುವುದು ಕಂಡುಬಂದಿದೆ. ಆದ್ದರಿಂದ ಸಾಲ ನೀಡುವಾಗ ಪರಿಶೀಲಿಸಬೇಕು. ದೌರ್ಜನ್ಯ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಬಹುದು.

 

* ಈಗಾಗಲೇ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಆಗುತ್ತಿರುವ ಕಿರುಕುಳಗಳ ಕುರಿತು ಮುಖ್ಯಮಂತ್ರಿಗಳು ಜಿಲ್ಲಾಮಟ್ಟದಲ್ಲಿ ನಿಗಾವಹಿಸಲು ನಿರ್ದೇಶನ ನೀಡಿದ್ದಾರೆ. ಕಾನೂನು ಬಾಹಿರವಾಗಿ ಸಾಲ ವಸೂಲಾತಿ ಮಾಡುವಂತಿಲ್ಲ. ಯಾವುದೇ ಕಾರಣಕ್ಕೂ ಸಾಲಗಾರರ ಮೇಲೆ ಬಾಕಿ ವಸೂಲಾತಿಗಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡ ಹೇರತಕ್ಕದ್ದಲ್ಲ.

 

* ಸಾಲ ಬಾಕಿ ವಸೂಲಾತಿ ನೆಪದಡಿ ಸಾಲಗಾರರ ಮನೆ/ ಕೌಂಪೌಂಡ್/ ಗೋಡೆ ಇತ್ಯಾದಿಗಳ ಮೇಲೆ ಗೋಡೆಬರಹ ಬರೆಯುವುದು/ ಅಂಟಿಸುವುದು ಮುಂತಾದ ಕಾರ್ಯ ನಡೆಸತಕ್ಕದ್ದಲ್ಲ. ಸಾಲ ವಸೂಲಾತಿ ವಿಚಾರವಾಗಿ ದೌರ್ಜನ್ಯ/ ಅಸಭ್ಯ ವರ್ತನೆ ತೋರುವುದು ಅಥವಾ ಬಲತ್ಕಾರವಾಗಿ ಚರಾಸ್ಥಿ/ ಸ್ಥಿರಾಸ್ಥಿ ಜಪ್ತಿ ಮಾಡುವಂತಿಲ್ಲ.

 

* ನೋಂದಣಿಯಾಗಿರದ ಯಾವುದೇ ಮೈಕ್ರೋ ಫೈನಾನ್ಸ್ ಕಂಪನಿಗಳು ಕಾರ್ಯಾಚರಿಸುವಂತಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿಪಡಿಸಿದ ಗರಿಷ್ಟ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿದರ ವಿಧಿಸತಕ್ಕದ್ದಲ್ಲ/ ವಸೂಲಿ ಮಾಡುವಂತಿಲ್ಲ.

 

* ಮೈಕ್ರೋ ಫೈನಾನ್ಸ್ ಕಂಪನಿಗಳು ಮೇಲೆ ತಿಳಿಸಿದಂತೆ ಅಥವಾ ಇನ್ಯಾವುದೇ ರೀತಿಯಿಂದ ಸಾಲಗಾರರಿಗೆ ಕಿರುಕುಳ ನೀಡಿದಲ್ಲಿ, ಸಾಲಗಾರರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಲ್ಲಿ ಅಥವಾ ಕಿರುಕುಳ ನೀಡುವುದು ಕಂಡುಬಂದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೂ ಅವಕಾಶವಿದೆ.