Home latest RBI ALERT : ಗಮನಿಸಿ, ಆರ್ ಬಿಐ ನಿಂದ ಮಹತ್ವದ ಮಾಹಿತಿ |

RBI ALERT : ಗಮನಿಸಿ, ಆರ್ ಬಿಐ ನಿಂದ ಮಹತ್ವದ ಮಾಹಿತಿ |

Hindu neighbor gifts plot of land

Hindu neighbour gifts land to Muslim journalist

ಭಾರತೀಯ ರಿಸರ್ವ್ ಬ್ಯಾಂಕ್( RBI) ಇತ್ತೀಚೆಗೆ
ವಿದೇಶಿ ವಿನಿಮಯದಲ್ಲಿ ವ್ಯವಹರಿಸಲು ಮತ್ತು
ವಿದೇಶೀ ವಿನಿಮಯ ವಹಿವಾಟುಗಳಿಗಾಗಿ
ಎಲೆಕ್ಟ್ರಾನಿಕ್ ಟ್ರೇಡಿಂಗ್ ಪ್ಲಾಟ್ಮಾರ್ಮ್ ಗಳನ್ನು
ನಿರ್ವಹಿಸಲು ಅಧಿಕಾರ ಹೊಂದಿರದ ಅಪ್ಲಿಕೇಶನ್ಗಳು
ಮತ್ತು ಘಟಕಗಳ ಹೆಸರುಗಳನ್ನು ಒಳಗೊಂಡ ‘ಎಚ್ಚರಿಕೆ
ಪಟ್ಟಿ’ ಯನ್ನು ಬಿಡುಗಡೆ ಮಾಡಿದೆ.

ಇತ್ತೀಚೆಗೆ ಅನಧಿಕೃತ ವೇದಿಕೆಗಳು ಜನರನ್ನು ಮರಳು ಮಾಡಲೆಂದೇ ಹುಟ್ಟಿವೆ. ಈ ಹೂಡಿಕೆಯ ಮೇಲೆ ಉನ್ನತ ಆದಾಯದ ಭರವಸೆ ನೀಡುವ ಮೂಲಕ ಜನರನ್ನು ಆಕರ್ಷಿಸಲು ಶತಪ್ರಯತ್ನ ಮಾಡುತ್ತಿದೆ. ಹಾಗಾಗಿ ಇಂತಹ ಪ್ಲಾಟ್ನಾರ್ಮ್ಗಳನ್ನು ಬಳಸುವುದು ಕೇವಲ ಅಪಾಯಕಾರಿ ಮಾತ್ರವಲ್ಲ ಬಳಕೆದಾರರನ್ನು ಕಾನೂನು ತೊಂದರೆಗೆ ಸಿಲುಕಿಸಬಹುದು ಎಂದು ಆರ್ ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಫೆಮಾ ಅಡಿಯಲ್ಲಿ ಅನುಮತಿಸಲಾದ ಅಥವಾ ಆರ್ಬಿಐನಿಂದ ಅಧಿಕೃತಗೊಳಿಸದ ಇಟಿಪಿಗಳನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ವಿದೇಶಿ ವಿನಿಮಯ ವಹಿವಾಟುಗಳನ್ನು ಕೈಗೊಳ್ಳುವ ವ್ಯಕ್ತಿಗಳು ಫೆಮಾ ಅಡಿಯಲ್ಲಿ ಕಾನೂನು ಕ್ರಮಕ್ಕೆ ತಮ್ಮನ್ನು ತಾವು ಹೊಣೆಗಾರರನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ಆರ್ಬಿಐ ಸೆಪ್ಟೆಂಬರ್ 7, 2022 ರ ಹೇಳಿಕೆಯಲ್ಲಿ ತಿಳಿಸಿದೆ.

‘ಅನಧಿಕೃತ ಇಟಿಪಿಗಳಲ್ಲಿ ವಿದೇಶಿ ವಿನಿಮಯ ವಹಿವಾಟುಗಳನ್ನು ಕೈಗೊಳ್ಳದಂತೆ ಅಥವಾ ಅಂತಹ ಅನಧಿಕೃತ ವಹಿವಾಟುಗಳಿಗೆ ಹಣವನ್ನು ಕಳುಹಿಸದಂತೆ / ಠೇವಣಿ ಇಡದಂತೆ ಸಾರ್ವಜನಿಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದೆ.

ಅನಧಿಕೃತ ವಿದೇಶೀ ವಿನಿಮಯ ವ್ಯಾಪಾರ ಅಪ್ಲಿಕೇಶನ್ ಗಳು ಮತ್ತು ವೆಬ್ ಸೈಟ್ ಗಳ ಪೂರ್ಣ ಪಟ್ಟಿ ಇಲ್ಲಿದೆ.