Home News ನೆಟ್ಟಣದಲ್ಲಿ ಕೂಲಿ ಕೆಲಸ ಮಾಡಿದ್ದರ ಮೆಲುಕು ಹಾಕಿದ ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣನವರ್

ನೆಟ್ಟಣದಲ್ಲಿ ಕೂಲಿ ಕೆಲಸ ಮಾಡಿದ್ದರ ಮೆಲುಕು ಹಾಕಿದ ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣನವರ್

Hindu neighbor gifts plot of land

Hindu neighbour gifts land to Muslim journalist

ಸುಬ್ರಹ್ಮಣ್ಯ: ಕರ್ನಾಟಕದ ದಕ್ಷ ಐಪಿಎಸ್‌ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಡಿ. ಚನ್ನಣ್ಣನವರ್‌ ಅವರು ಸ್ನೇಹಿತರೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಧರ್ಮಸ್ಥಳಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ಕಡಬ ತಾಲೂಕಿನ ನೆಟ್ಟಣ ಪೇಟೆಯಲ್ಲಿ ತನ್ನ ವಾಹನ ನಿಲ್ಲಿಸಿ ಕೆಳಗಿಳಿದು ಅಲ್ಲಿನ ಪ್ರಕಾಶ್‌ ಎಂಬವರ ಹೊಟೇಲಿಗೆ ಭೇಟಿ ನೀಡಿದರು.

ನೆಟ್ಟಣದಲ್ಲಿ ಇಳಿಯುವುದಕ್ಕೂ ಒಂದು ಕಾರಣವಿತ್ತು. ಸುಮಾರು ಮೂವತ್ತು ವರ್ಷಗಳ ಹಿಂದೆ ನೆಟ್ಟಣಕ್ಕೆ ಸಮೀಪದ ಮೇರುಂಜಿ ಎಂಬಲ್ಲಿ ತೋಟವೊಂದರಲ್ಲಿ ಚನ್ನಣ್ಣನವರ್‌ ಅವರು ಕೂಲಿ ಕೆಲಸ ಮಾಡುವ ಸಲುವಾಗಿ ಕುಟುಂಬದ ಸದಸ್ಯರ ಜತೆಗೆ ಬಂದಿದ್ದರು.

ಅಂದು ಅವರು ಇಲ್ಲಿ ಕೆಲಸಕ್ಕೆ ಬರುವಾಗ ಇದ್ದ ರೈಲ್ವೇ ಸೇತುವೆಯೊಂದು ಇಂದಿಗೂ ಅದೇ ತರಹ ಇರುವುದು ಮತ್ತು ನೆಟ್ಟಣ ಎಂಬ ಈ ಪುಟ್ಟ ಗ್ರಾಮ ದೊಡ್ಡ ಬದಲಾವಣೆಗಳು ಇಲ್ಲದೆ ಅದೇ ತರಹ ಇರುವುದು ಈ ಪ್ರದೇಶವನ್ನು ಗುರುತಿಸಲು ಸಾಧ್ಯವಾಯಿತು ಎಂದ ಅವರು, ತಾನು ಇಲ್ಲಿ ಕೆಲಸ ಮಾಡಿದ ದಿನಗಳ ಅನುಭವವನ್ನು ತನ್ನ ಜತೆಗೆ ಬಂದ ಗೆಳೆಯರಲ್ಲಿ ಮತ್ತು ಹೊಟೇಲ್‌ ಮಾಲಕ ಪ್ರಕಾಶ್‌ ಅವರಲ್ಲಿ ಹಂಚಿಕೊಂಡರು.ಕೇಪು ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೂ ಬೇಟಿ ನೀಡಿದರು.