Home News Rape Case: ಮದುವೆ ರಿಸೆಪ್ಷನ್ ನಲ್ಲಿ ಖುಷ್ ಖುಷಿಯಾಗಿದ್ದ ಅತ್ಯಾಚಾರ ಸಂತ್ರಸ್ತೆ – ನ್ಯಾಯಾಲಯದಿಂದ ಅತ್ಯಾಚಾರ...

Rape Case: ಮದುವೆ ರಿಸೆಪ್ಷನ್ ನಲ್ಲಿ ಖುಷ್ ಖುಷಿಯಾಗಿದ್ದ ಅತ್ಯಾಚಾರ ಸಂತ್ರಸ್ತೆ – ನ್ಯಾಯಾಲಯದಿಂದ ಅತ್ಯಾಚಾರ ಆರೋಪಿ ಖುಲಾಸೆ

Hindu neighbor gifts plot of land

Hindu neighbour gifts land to Muslim journalist

Rape Case : ಅತ್ಯಾಚಾರ ಸಂತ್ರಸ್ತೆಯು ಮದುವೆಯ ರೆಸಿಪ್ಶನ್ ಅಲ್ಲಿ ಆರೋಪಿಯೊಂದಿಗೆ ಸಂತಸವಾಗಿ ಇರುವುದನ್ನು ಕಂಡ ಜಿಲ್ಲಾ ನ್ಯಾಯಾಲಯವು, ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

ಹೌದು, ಆರೋಪಿಯೊಂದಿಗೆ ಮದುವೆಯ ಆರತಕ್ಷತೆಯ ಛಾಯಾಚಿತ್ರಗಳಲ್ಲಿ ಬಾಲಕಿ ತುಂಬಾ ಸಂತೋಷದಿಂದ ಕಾಣುತ್ತಿದ್ದಳು ಮತ್ತು ಈ ಕಾರ್ಯಕ್ರಮದಲ್ಲಿ 200 ಜನರು ಭಾಗವಹಿಸಿದ್ದರು ಎಂದು ಗಮನಿಸಿದ ಚಂಡೀಗಢದ ಜಿಲ್ಲಾ ನ್ಯಾಯಾಲಯವು ಅಪಹರಣ ಮತ್ತು ಅತ್ಯಾಚಾರ ಆರೋಪದಿಂದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.

 2023ರಲ್ಲಿ ಸಂತ್ರಸ್ತೆಯ ತಂದೆಯು, ತನ್ನ ಮಗಳನ್ನು ಆರೋಪಿ ಮದುವೆಯ ಆಮಿಷ ಒಡ್ಡಿ ದೈಹಿಕವಾಗಿ ಬಳಸಿಕೊಂಡಿದ್ದಾನೆ ಇಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 363 (ಅಪಹರಣ) ಮತ್ತು 376 (2) (ಎನ್) (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 4 ಮತ್ತು 6 ರ ಅಡಿಯಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ಆರೋಪಿಯ ವಿರುದ್ಧ ಪ್ರಾಸಿಕ್ಯೂಷನ್ ಎರಡು ವರ್ಷಗಳ ಕಾಲ ಸಂತ್ರಸ್ತೆಯ ಕಸ್ಟಡಿಯಲ್ಲಿ, ಆರೋಪಿ ಅವಳೊಂದಿಗೆ ಅನೇಕ ಬಾರಿ ಬಲವಂತದ ಲೈಂಗಿಕ ಸಂಬಂಧವನ್ನು ಬೆಳೆಸಿಕೊಂಡಿದ್ದಾನೆ ಎಂದು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ ಎಂದು ವಾದಿಸಿತು.

ಬಳಿಕ ನ್ಯಾಯಾಲಯವು ‘ಶಾಲಾ ದಾಖಲೆ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ದಾಖಲೆಯಂತಹ ಯಾವುದೇ ಸಾಕ್ಷ್ಯಾಧಾರಗಳ ಅನುಪಸ್ಥಿತಿಯಲ್ಲಿ, ಘಟನೆ ನಡೆದ ದಿನಾಂಕದಂದು ಬಾಲಕಿ ಅಪ್ರಾಪ್ತ ವಯಸ್ಕ ಎಂದು ಹೇಳಲು ಸಾಧ್ಯವಿಲ್ಲ. ಆರೋಪಿಯೊಂದಿಗೆ ಮದುವೆ ಮಾಡಿದಾಗ ಸಂತ್ರಸ್ತೆ ಅಪ್ರಾಪ್ತ ವಯಸ್ಕ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದರು. ಅಲ್ಲದೆ ಅತ್ಯಾಚಾರ ಆರೋಪಿಯನ್ನು ಆರೋಪ ಮುಕ್ತವನ್ನಾಗಿಸಿದೆ.