Home News Crime: ರೈಲಿನಲ್ಲಿ ಗರ್ಭಿಣಿ ಮೇಲೆ ಅತ್ಯಾಚಾರ; ಮಹಿಳೆಗೆ ಗರ್ಭಪಾತ!

Crime: ರೈಲಿನಲ್ಲಿ ಗರ್ಭಿಣಿ ಮೇಲೆ ಅತ್ಯಾಚಾರ; ಮಹಿಳೆಗೆ ಗರ್ಭಪಾತ!

Hindu neighbor gifts plot of land

Hindu neighbour gifts land to Muslim journalist

Crime: ತಮಿಳುನಾಡಿನ ಜೋಲಾರ್‌ಪೇಟೆ ಬಳಿ ಚಲಿಸುವ ರೈಲಿನಲ್ಲಿ ನಾಲ್ಕು ತಿಂಗಳ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿ, ತಳ್ಳಿ ಗಂಭೀರ ಗಾಯಗೊಳಿಸಲಾಗಿದೆ. ಹೌದು, ಕೊಯಮತ್ತೂರಿನಲ್ಲಿ ಟೇಲರಿಂಗ್‌ ಮಾಡುತ್ತಿದ್ದ ಸಂತ್ರಸ್ತೆ ಕೊಯಿಮತ್ತೂರ್-ತಿರುಪತಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಚಿತ್ತೂರಿಗೆ ಪ್ರಯಾಣಿಸುತ್ತಿದ್ದಾಗ, ಮಹಿಳೆಯರ ವಿಭಾಗದಲ್ಲಿದ್ದ ವ್ಯಕ್ತಿಯೊಬ್ಬರು ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.

 

ಮಹಿಳೆ ನೀಡಿದ ಮಾಹಿತಿ ಪ್ರಕಾರ, ಚಲಿಸುತ್ತಿದ್ದ ರೈಲಿನಲ್ಲಿ ಇತರ ಮಹಿಳಾ ಪ್ರಯಾಣಿಕರು ಇಳಿದ ನಂತರ ಆರೋಪಿಯು ಮಹಿಳಾ ಬೋಗಿಯನ್ನು ಹತ್ತಿದ್ದ. ಆದ್ರೆ ಇದು ಮಹಿಳಾ ಬೋಗಿಯಾಗಿರುವುದರಿಂದ ನಾನು ಅವನನ್ನು ಕೆಳಗಿಳಿಯಲು ಕೇಳಿದಾಗ, ರೈಲು ಈಗಾಗಲೇ ಚಲಿಸಲು ಪ್ರಾರಂಭಿಸಿದೆ ಮತ್ತು ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ಅವನು ಹೇಳಿದನು. ಅರ್ಧ ಗಂಟೆ ಆ ವ್ಯಕ್ತಿ ಮೌನವಾಗಿದ್ದ. ನಂತರ, ಅವನು ಬಾತ್ರೂಮ್ ನಿಂದ ಬೆತ್ತಲೆಯಾಗಿ ಬಂದು ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದನು. ನಾನು ಗರ್ಭಿಣಿ ಮತ್ತು ನಾನು ನಿಮ್ಮ ಸಹೋದರಿಯಂತೆ ಎಂದು ಹೇಳುತ್ತಾ ಬೇಡಿಕೊಂಡರೂ ಪಾಪಿ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ದೌರ್ಜನ್ಯವೆಸಗಿದ್ದಾಗಿ (Crime) ಮಹಿಳೆ ಹೇಳಿಕೊಂಡಿದ್ದಾಳೆ.

ಇನ್ನು ಮಹಿಳೆಯ ಕೈಕಾಲುಗಳು ಮತ್ತು ತಲೆಯಲ್ಲಿ ಮುರಿತಗಳು ಸೇರಿದಂತೆ ತೀವ್ರವಾದ ಗಾಯಗಳಾಗಿದ್ದು, ಆಕೆಯ ತಲೆಯ ಮೇಲೆ 20 ಹೊಲಿಗೆಗಳನ್ನು ಹಾಕಲಾಗಿದ್ದು, ಅತಿಯಾದ ರಕ್ತ ಸ್ರವದಿಂದ ಆಕೆಗೆ ಗರ್ಭಪಾತವಾಗಿದೆ.

ಆರೋಪಿ ಹೇಮರಾಜ್ ಬಂಧನ:

ಇದೀಗ ವೆಲ್ಲೂರಿನ ಕೆವಿ ಕುಪ್ಪಂನ 30 ವರ್ಷದ ಹೇಮರಾಜ್ ಎಂದು ಗುರುತಿಸಲಾದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು 12 ಗಂಟೆಗಳ ಒಳಗೆ ಪತ್ತೆಹಚ್ಚಲಾಯಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಕೊಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆತ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ತಿಳಿದುಬಂದಿದೆ. ಸದ್ಯ, ದಕ್ಷಿಣ ರೈಲ್ವೆ ಮಹಿಳೆಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.