

Rape in Pakistan: ಪಾಕಿಸ್ತಾನ, ಮಾನ ಮರ್ಯಾದೆ ಎಲ್ಲಾ ಬಿಟ್ಟು ಬದುಕುತ್ತಿರುವ ದೇಶ ಎಂದರೆ ತಪ್ಪಾಗಲಾರದು. ಈ ಪಾಪಿಸ್ತಾನ ಬೇರೆಯವರಿಗೆ ತೊಂದರೆ ಕೊಟ್ಟು ಬದುಕುವ ದೇಶ. ಅಷ್ಟೆ ಮಾತ್ರವಲ್ಲ ಅಲ್ಲಿನ ಜನರಿಗೂ ಅಲ್ಲಿ ಯಾವುದೇ ಭದ್ರತೆ(Security) ಇಲ್ಲ. ಅದರಲ್ಲೂ ಅಲ್ಲಿನ ಹೆಣ್ಣು(Girls) ಮಕ್ಕಳು, ಮಹಿಳೆಯರಿಗಂತೂ(Women) ತನ್ನ ಮನೆಯವರಿಂದಲೇ ಸುರಕ್ಷತೆ ಇಲ್ಲ. ಇಡೀ ಹೆಣ್ಣು ಕುಲವೇ ತಲೆ ತಗ್ಗಿಸುವ ಕೆಲಸವನ್ನು ಈ ಪಾಕಿಸ್ತಾನ(Pakistan) ಮಂದಿ ಮಾಡುತ್ತಿದ್ದಾರೆ. ಈ ಬಗ್ಗೆ ಪಾಕ್ ಸಂಸದೆ(MP) ಟಿವಿ ಡಿಬೆಟ್ನಲ್ಲಿ ಬಿಚ್ಚಿಟ್ಟ ದಾಖಲೆ ಈಗ ಇಡೀ ಪಾಕಿಸ್ತಾನವನ್ನು ತಲೆ ತಗ್ಗಿಸುವಂತೆ ಮಾಡಿದೆ. ಪಾಕಿಸ್ತಾನದ ಮಹಿಳೆಯರ ಮೇಲೆ ಸ್ವತಃ ಅವರ ಮನೆಯ ಪುರುಷರಿಂದಲೇ ಅತ್ಯಾಚಾರ ನಡೆಯುತ್ತಂತೆ!
https://twitter.com/i/status/1839516901778604133
ಈ ಬಗ್ಗೆ ಪಾಕಿಸ್ತಾನದ ಸಂಸದೆ ಒಬ್ಬರು ಎಳೆ ಎಳೆಯಾಗಿ ಮಾಹಿತಿ ಬಿಟ್ಟಿಟ್ಟಿದ್ದಾರೆ. ಪಾಕ್ ಗಂಡಸರು ಒಂದು ಹೆಣ್ಣನ್ನು ಅವಳು ತಮ್ಮ ಸಹೋದರಿಗೆ, ತಾಯಿ, ಮಗಳು ಅನ್ನೋದನ್ನು ಲೆಕ್ಕಿಸದೆ ಅವರ ಮೇಲೆ ಅತ್ಯಾಚಾರ ಮಾಡುತ್ತಾರೆ. ಈ ಬಗ್ಗೆ ಪಾಕ್ ಸಂಸದೆ ಟಿವಿ ಡಿಬೆಟ್ನಲ್ಲಿ ದಾಖಲೆ ಸಮೇತ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪಾಪಿ ಪಾಕಿಸ್ತಾನದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಪಾಕಿಸ್ತಾನದಲ್ಲಿ ಶೇ 82ರಷ್ಟು ಮಹಿಳೆಯರು ತಮ್ಮ ಮನೆಯ ಅವರ ತಂದೆ, ಸಹೋದರರು, ಅಜ್ಜ ಹಾಗೂ ಚಿಕ್ಕಪ್ಪ ಇವರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಹೀಗಂತ ಅತ್ಯಾಚಾರ ಆಗಿರುವ ಮಹಿಳೆಯರೇ ಹೇಳಿದ್ದಾರೆ. ವಾರ್ ಆನ್ ರೇಪ್ (WAR) ಸಂಸ್ಥೆ ಮಾಡಿದ ವರದಿಯನ್ನು ಸಂಸದೆ ಷಂಡನಾ ಗುಲ್ಜಾರ್ ಖಾನ್ ಟಿವಿ ಶೋವೊಂದರಲ್ಲಿ ಜನರ ಮುಂದೆ ಬಿಚ್ಚುಟ್ಟು ಪಾಕಿಸ್ತಾನ ಗಂಡಸರ ಅಮಾನವೀಯ ಕೃತ್ಯವನ್ನು ಬಯಲಿಗೆಳೆದಿದ್ದಾರೆ.
ಹೆಚ್ಚಿನ ಹುಡುಗಿಯರ ಮೇಲೆ ಅವರ ಮನೆಯ ಸದಸ್ಯರೇ ಅತ್ಯಾಚಾರ ಮಾಡಿದ್ದು, ಇದರಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಗರ್ಭಿಣಿಯಾಗುತ್ತಾರೆ. ಆದರೆ ಈ ಬಗ್ಗೆ ಅವರು ಯಾವದೇ ಕಾರಣಕ್ಕೂ ಪೊಲೀಸರಿಗೆ ದೂರು ನೀಡುವುದಿಲ್ಲ. ಬದಲಿಗೆ ಗರ್ಭಪಾತ ಮಾಡಿಕೊಳ್ಳುತ್ತಾರೆ. ಈ ದಾಖಲೆಯನ್ನು ಬಿಡುಗಡೆ ಮಾಡಿದವರು ಗುಲ್ಜಾರ್ ಒಬ್ಬ ರಾಜಕಾರಣಿ. ಈಕೆ ಹಾಲಿ ಸಂಸದೆಯೂ ಕೂಡ. ಆಗಸ್ಟ್ 2018 ರಿಂದ ಇವರು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಟಿವಿಯಲ್ಲಿ ಹೇಳಿದ ಈ ಸುದ್ದಿ ಭಾರೀ ಸದ್ದು ಮಾಡುತ್ತಿರೋದು. ಒಬ್ಬ ಸಂಸದೆಯೇ ದಾಖಲೆ ಸಹಿತ ಸಾಕ್ಷಿಯನ್ನು ನೀಡಿ ಈ ದುಷ್ಕೃತ್ಯವನ್ನು ಬಯಲಿಗೆಳೆದಿದ್ದು ಪಾಕ್ನಲ್ಲಿ ತಲ್ಲಣ ಸೃಷ್ಟಿಸಿದೆ.
ತನ್ನ ಮಗಳ ಮೇಲೆಯೇ ಗಂಡ ಅತ್ಯಾಚಾರ ಮಾಡಿದ್ರು ತಾಯಿ ಸುಮ್ಮನಿರ್ತಾಳೆ. ಕಾರಣ ಆಕೆ ತನ್ನ ಗಂಡನನ್ನು ಬಿಟ್ಟುಕೊಡುವುದಿಲ್ಲ. ಈ ಕಾರಣಕ್ಕೆ ತಾಯಿ ಯಾವ ರೀತಿಯಲ್ಲೂ ಪ್ರತಿಭಟಿಸುವುದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಿಲ್ಲ. ಪಾಕಿಸ್ತಾನದ ಪ್ರತಿ ಮನೆಯಲ್ಲೂ ಇದು ಮಾಮೂಲಿ. ಹಾಗಾಗಿ ಯಾರೊಬ್ಬರು ಮಾತನಾಡುವುದಿಲ್ಲ. ಈ ಕೃತ್ಯದ ವಿರುದ್ಧ ಪ್ರತಿಭಟಿಸಲು ಯಾರು ಮುಂದೆ ಬರೋದಿಲ್ಲ. ಯಾಕೆಂದರೆ ಎಲ್ಲರೂ ಜೀವ ಭಯದಲ್ಲೇ ಬದುಕುತ್ತಿದ್ದಾರೆ ಎಂದು ಸಂಸದೆ ಮಾಹಿತಿ ಬಹಿರಂಗಪಡಿಸಿದ್ದಾರೆ.













