Home News Bellary: ಪರೀಕ್ಷೆ ಬರೆಯುತ್ತಿದ್ದ ಯುವತಿಯನ್ನು ಕರೆದ ಕಿರಾತಕರು, ನಂತರ ಆಟೋದಲ್ಲಿ ಕರೆದೊಯ್ದು ಸಾಮೂಹಿಕ ರೇಪ್ !

Bellary: ಪರೀಕ್ಷೆ ಬರೆಯುತ್ತಿದ್ದ ಯುವತಿಯನ್ನು ಕರೆದ ಕಿರಾತಕರು, ನಂತರ ಆಟೋದಲ್ಲಿ ಕರೆದೊಯ್ದು ಸಾಮೂಹಿಕ ರೇಪ್ !

Bellary

Hindu neighbor gifts plot of land

Hindu neighbour gifts land to Muslim journalist

ಕಾಲೇಜು ವಿದ್ಯಾರ್ಥಿನಿಯನ್ನು ಕ್ಲಾಸಿನಿಂದಲೇ ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.

ಸದ್ಯ, ಬಿಕಾಂ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ನೀಡಿದ ದೂರಿನ ಅನ್ವಯ ನಾಲ್ವರ ವಿರುದ್ಧ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಅಚ್ಚರಿಯ ವಿಷಯ ಏನೆಂದರೆ, ಆರೋಪಿಗಳಲ್ಲಿ ಒಬ್ಬಾತ ಆಕೆಯ ಸಹೋದರ ಎಂದು ಹೇಳಿಕೊಂಡು ಕಾಲೇಜಿಗೆ ಬಂದಿದ್ದ. ಅಲ್ಲಿ ಆಕೆ ಪರೀಕ್ಷೆ ಬರೆಯುತ್ತಿದ್ದಾಗಲೇ ಯುವತಿಯನ್ನು ತರಗತಿಯಿಂದ ಹೊರಗೆ ಕರೆದಿದ್ದಾನೆ. ನಂತರ ಆಕೆಯನ್ನು ಆತ ಎಳೆದೊಯ್ದಿದ್ದಾನೆ.

ಆಕೆ ಕಾಲೇಜಿನಿಂದ ಆಕೆಯನ್ನು ಬಲವಂತವಾಗಿ ಕರೆದು, ಆಟೋದಲ್ಲಿ ಹತ್ತಿಸಿಕೊಂಡು ಕೊಪ್ಪಳ ಜಿಲ್ಲೆಯ ಸಣಾಪುರದ ಹೋಟೆಲ್ ಒಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಗೆ ಮಾದಕ ದ್ರವ್ಯ ಬೆರೆಸಿದ ಬಿಯರ್ ಕುಡಿಸಲಾಗಿದೆ ಎಂಡಿ ದೂರಲಾಗಿದೆ. ಅಲ್ಲಿ ಯುವತಿ ಪ್ರಜ್ಞೆ ತಪ್ಪುತ್ತಿದ್ದಂತೆ ಆರೋಪಿಗಳು ಆಕೆಯ ಮೇಲೆ ಸಾಮೂಹಿಕವಾಗಿ ದಾಳಿ ಮಾಡಿದ್ದು ಅತ್ಯಾಚಾರ ಎಸಗಿದ್ದಾರೆ.

ಅಲ್ಲಿ ಆಕೆಗೆ ಪ್ರಜ್ಞೆ ಬಂದ ಮೇಲೆ ಸಂತ್ರಸ್ತೆಯು ನವೀನ್, ಸಕೀಬ್, ತನು ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಆರೋಪಿಗಳೆಲ್ಲರೂ ಬಳ್ಳಾರಿಯ ಕೌಲ್ ಬಜಾರ್ ನಿವಾಸಿಗಳು ಎನ್ನಲಾಗಿದೆ. ಈಗ ಮುಂದಿನ ತನಿಖೆ ನಡೆಯುತ್ತಿದೆ. ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

 

ಇದನ್ನು ಓದಿ: Big Boss Season 10: ಬಿಗ್ ಬಾಸ್ ನಲ್ಲಿ ಏಕಾಏಕಿ ಹಾವುಗಳು ಪ್ರತ್ಯಕ್ಷ – ಹಾವುಗಳ ರೋಚಕ ವಿಸ್ಮಯ ಲೋಕ ಬಿಚ್ಚಿಟ್ಟ ಸ್ನೇಕ್ ಶ್ಯಾಮ್ !