Home News Rape Case: ಮಡೆನೂರು ಮನು ವಿರುದ್ಧದ ಅತ್ಯಾಚಾರ ಪ್ರಕರಣ – ‘ನಾನು ಹೀಗೆ ಮಾಡಬಾರದಿತ್ತು’ ಯೂಟರ್ನ್‌...

Rape Case: ಮಡೆನೂರು ಮನು ವಿರುದ್ಧದ ಅತ್ಯಾಚಾರ ಪ್ರಕರಣ – ‘ನಾನು ಹೀಗೆ ಮಾಡಬಾರದಿತ್ತು’ ಯೂಟರ್ನ್‌ ಹೊಡೆದ ನಟಿ!!

Hindu neighbor gifts plot of land

Hindu neighbour gifts land to Muslim journalist

Rape Case: ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ಮೇಲೆ ಯುವತಿ ಅತ್ಯಾಚಾರದ ಆರೋಪವನ್ನು ಮಾಡಿದ್ದು, ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಸದ್ಯ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮನು ಅವರನ್ನು ಅರೆಸ್ಟ್ ಮಾಡಲಾಗಿದೆ. ಆದರೆ ಇದೀಗ ದೂರ ನೀಡಿದ ಸಂತ್ರಸ್ತೇ ಯು ಟರ್ನ್ ಹೊಡೆದಿದ್ದಾಳೆ.

ದೂರು ನೀಡಿದ ಸಂತ್ರಸ್ಥ ಮಹಿಳೆ ಆರಂಭದಲ್ಲಿ ‘ನಾವು ಲವ್ ಮಾಡಿಲ್ಲ. ನನಗೆ ಅವನು ಬೆಸ್ಟ್ ಫ್ರೆಂಡ್ ಆಗಿದ್ದ. ಅದನ್ನೇ ದುರ್ಬಳಕೆ ಮಾಡಿಕೊಂಡ. ಅವನಿಗೆ ಮದುವೆ ಆಗಿ, ಮಗಳು ಇದ್ದಾಳೆ. ಆದರೂ ಅತ್ಯಾಚಾರ ಮಾಡಿದ್ದಾನೆ. ಅಂಥವನನ್ನು ನಾನು ಯಾಕೆ ಲವ್ ಮಾಡಲಿ? ಅತ್ಯಾಚಾರ ಮಾಡುವಾಗ ಅವನ ತಲೆಯಲ್ಲಿ ಬುದ್ಧಿ ಇರಲಿಲ್ಲವಾ? ಬೇರೆ ಯಾರೋ ನನ್ನ ಮೇಲೆ ಅತ್ಯಾಚಾರ ಮಾಡಿದ್ದರೆ ಮುಲಾಜಿಲ್ಲದೇ ದೂರು ನೀಡುತ್ತಿದ್ದೆ. ಆದರೆ ಮನು (Madenur Manu) ನನ್ನ ಬೆಸ್ಟ್ ಫ್ರೆಂಡ್. ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಮದುವೆ ಆಗಿ ಮಗಳು ಇರುವವನು ನನ್ನ ಮೇಲೆ ಕೆಟ್ಟ ದೃಷ್ಟಿ ಬೀರಲ್ಲ ಅಂತ ನಾನು ನಂಬಿದ್ದೆ’ ಎಂದಿದ್ದರು ಸಂತ್ರಸ್ಥ ಮಹಿಳೆ.

ಅಲ್ಲದೆ ‘ಅವನು ಏನೇನೋ ಮಾಡುತ್ತಿದ್ದ. ಮಾಟ ಮಂತ್ರ ಇದೆಯೋ ಇಲ್ಲವೋ ಗೊತ್ತಿಲ್ಲ. ಅವನು ಮಾಡುತ್ತಿದ್ದ ರೀತಿ ನನಗೆ ಮಂಕು ಮಾಡಲು ಶುರು ಮಾಡಿತು. ಬೂದಿ ತಂದು ಮುಖಕ್ಕೆ ಎರಚುವುದು ಮತ್ತು ವಶೀಕರಣ ಮಾಡುತ್ತಿದ್ದ. ಅದರಿಂದ ನಾನು ಮಂಕಾದೆ. ಪದೇಪದೇ ಗರ್ಭಪಾತ ಆಯಿತು. ಒಂದು ಮಗು ಉಳಿಸಿಕೊಳ್ಳುತ್ತೇನೆ ಅಂತ ಹೇಳಿದೆ. ಈಗ ಬೇಡ, 2 ವರ್ಷ ಬಿಟ್ಟು ಎಲ್ಲರಿಗೂ ಹೇಳೋಣ ಎಂದಿದ್ದ. ಹಿಂಸೆ ಕೊಟ್ಟು ಗರ್ಭಪಾತ ಮಾಡಿಸಿದ’ ಎಂದು ಸಂತ್ರಸ್ಥ ಮಹಿಳೆ ಆರೋಪ ಮಾಡಿದ್ದಳು.

ಅದರೀಗ ನಟಿ ಉಲ್ಟಾ ಹೊಡೆದಿದ್ದು “ನನ್ನ ಮನು ಮಧ್ಯೆ ಒಂದಷ್ಟು‌ ಜಗಳ ಗೊಂದಲಗಳಿತ್ತು. ಸಿನಿಮಾ ಪ್ರೊಡ್ಯೂಸರ್‌ಗೆ ಮೆಸೇಜ್ ಮಾಡಿದ್ದು ತಪ್ಪು. ಸಿನಿಮಾಗೆ ತೊಂದರೆ ಕೊಡುವ ಉದ್ದೇಶ ನನ್ನದಲ್ಲ. ಏನಿದ್ದರು ನಮ್ಮ ಮಧ್ಯೆ ಇರಬೇಕಿತ್ತು. ಸಿನಿಮಾಗೆ ತೊಂದರೆ ಕೊಡುವ ಉದ್ದೇಶ ಇರಲಿಲ್ಲ. ಬಳಿಕ ವಕೀಲರನ್ನು ಮೀಟ್ ಮಾಡಿಸಿ ನನ್ನ ತಪ್ಪಿನ ಬಗ್ಗೆ ಅರಿವು ಮಾಡಿಸಿದ್ರು. ಇದು ನನ್ನ ಸ್ವಂತ ನಿರ್ಧಾರ. ಯಾರೂ ಕೂಡ ಒತ್ತಾಯಪೂರ್ವಕವಾಗಿ ದೂರು ನೀಡಿಸಿಲ್ಲ. ಕುಲದಲ್ಲಿ ಕೀಳ್ಯಾವುದೋ ಸಿನಿಮಾಗೆ ಒಳ್ಳೆದಾಗಲಿ. ಅಕಸ್ಮಾತ್ ನಾನು ಸತ್ತರೂ ಕೂಡ ಯಾರೂ ಕಾರಣರಲ್ಲ. ಇದು ನನ್ನ ಸ್ವಂತ ನಿರ್ಧಾರ” ಎಂದು ನಟಿ ವಿಡಿಯೋ ರಿಲೀಸ್‌ ಮಾಡಿ ಹೇಳಿಕೆ ಕೊಟ್ಟಿದ್ದಾರೆ.