Home News Ramya: ರಮ್ಯಾಗೆ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಾಮೆಂಟ್ ವಿಚಾರ- ಚಿತ್ರದುರ್ಗದವರೇ ಹೆಚ್ಚು ಎಂದ ತನಿಖೆ

Ramya: ರಮ್ಯಾಗೆ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಾಮೆಂಟ್ ವಿಚಾರ- ಚಿತ್ರದುರ್ಗದವರೇ ಹೆಚ್ಚು ಎಂದ ತನಿಖೆ

Hindu neighbor gifts plot of land

Hindu neighbour gifts land to Muslim journalist

Ramya: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಲ್ಲಿ ಓರ್ವ ಒಬ್ಬ ದರ್ಶನ್ ಫ್ಯಾನ್, ಮತ್ತೊಬ್ಬ ನಟ ಧನ್ವೀರ್ ಫ್ಯಾನ್ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಅಲ್ಲದೆ ಈ ಬೆನ್ನಲ್ಲೇ ರಮ್ಯಳಿಗೆ ಮೆಸೇಜ್ ಮಾಡಿದ ಅನೇಕರು ಚಿತ್ರದುರ್ಗ ಮೂಲದವರೆ ಎಂಬುದು ತನಿಕೆಯಲ್ಲಿ ಬಯಲಾಗಿದೆ.

ಹೌದು, ಕೆಟ್ಟದಾಗಿ ಕಾಮೆಂಟ್ ಮತ್ತು ಮೆಸೇಜ್ ಮಾಡಿದ್ದ 48 ಜನರ ವಿರುದ್ಧ ಬೆಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಆಗ, ಶೇ.60ಕ್ಕಿಂತ ಅಧಿಕ ಜನರು ತಮ್ಮ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಆದರೆ, ಪೊಲೀಸರು ಮೆಸೇಜ್ ಮಾಡಿದವರ ಖಾತೆಯ ಐಪಿ ಅಡ್ರೆಸ್ ಹಿಡಿದು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಸೈಬರ್ ಕ್ರೈಂ ಪೊಲೀಸರಿಂದ ಈವರೆಗೆ ದೂರು ದಾಖಲಾದ 48 ಜನ ಆರೋಪಿಗಳ ಪೈಕಿ ಅತೀ ಕೆಟ್ಟದಾಗಿ ಸಂದೇಶ ಕಳಿಸಿದ 15 ಆರೋಪಿಗಳನ್ನ ಗುರುತಿಸಲಾಗಿದೆ. ಈ ಪೈಕಿ ನಾಲ್ವರನ್ನ ಬಂಧನ ಮಾಡಿರುವ ಪೊಲೀಸರು, ಅಶ್ಲೀಲ ಸಂದೇಶ ಹರಡುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಅಶ್ಲೀಲವಾಗಿ ಕೆಟ್ಟದಾಗಿ ಕಾಮೆಂಟ್ ಮಾಡದವರ ಪೈಕಿ ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಕೋಲಾರ ಭಾಗದವರೇ ಹೆಚ್ಚು ಎಂದು ಹೇಳಿದ್ದಾರೆ.

ಇದನ್ನು ಓದಿ: Priyanak Gandhi: ನಿಜವಾದ ಭಾರತೀಯರು ಯಾರೆಂದು ಜಡ್ಜ್‌ ತೀರ್ಮಾನ ಮಾಡೋದಲ್ಲ-ಪ್ರಿಯಾಂಕಾ ಗಾಂಧಿ