Home News Rakshith Shivaram: ಗ್ಯಾರಂಟಿಗಳಿಂದ ದಾರಿ ತಪ್ಪಿದ್ದು ಹೆಣ್ಣುಮಕ್ಕಳಲ್ಲ, ದಾರಿ ಬಿಟ್ಟದ್ದು ನಿಮ್ಮದೇ ಕುಟುಂಬದ ಕುಡಿ- ಕುಮಾರಸ್ವಾಮಿಯನ್ನು...

Rakshith Shivaram: ಗ್ಯಾರಂಟಿಗಳಿಂದ ದಾರಿ ತಪ್ಪಿದ್ದು ಹೆಣ್ಣುಮಕ್ಕಳಲ್ಲ, ದಾರಿ ಬಿಟ್ಟದ್ದು ನಿಮ್ಮದೇ ಕುಟುಂಬದ ಕುಡಿ- ಕುಮಾರಸ್ವಾಮಿಯನ್ನು ಲೇವಡಿ ಮಾಡಿದ ರಕ್ಷಿತ್ ಶಿವರಾo !

Rakshith Shivaram

Hindu neighbor gifts plot of land

Hindu neighbour gifts land to Muslim journalist

Rakshith Shivaram:  ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಇದೀಗ ಪ್ರಜ್ವಲ್ ರೇವಣ್ಣರ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕಟಕಿಯಾಡಿದ್ದಾರೆ. ಗ್ಯಾರೆಂಟಿಗಳಿಂದ ದಾರಿ ತಪ್ಪುತ್ತಿರುವುದು ರಾಜ್ಯದ ಹೆಣ್ಣು ಮಕ್ಕಳಲ್ಲ ನಿಮ್ಮ ಕುಟುಂಬದ ಮಕ್ಕಳು ಎಂದಿದ್ದಾರೆ ರಕ್ಷಿತ ಶಿವರಾಂ.

ಹಾಸನದ ಹಾಲಿ ಸಂಸದ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಡೆಸಿದ ಜಗತ್ತಿನ ಅತ್ಯಂತ ದೊಡ್ಡ ಲೈಂಗಿಕ ಹಗರಣ ಇದಾಗಿದೆ. ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ನೇಮಕ ಮಾಡಿರುವುದು ಸ್ವಾಗತಾರ್ಹ ವಿಷಯ. ಬೇಟಿ ಬಚಾವೋ ಬೇಟಿ ಪಡಾವೋ ಖ್ಯಾತಿಯ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮೌನವಹಿಸುವ ಮೂಲಕ ತಮ್ಮ ನಕಲಿತನ ಪ್ರದರ್ಶಿಸುತ್ತಿದ್ದಾರೆ. ಮಹಿಳೆಯರನ್ನು ಮಾತೆ, ದೇವತೆ ಎಂದು ಹೇಳುವ ಬಿಜೆಪಿಗರು ಈ ಲೈಂಗಿಕ ದೌರ್ಜನ್ಯ, ಹಿಂಸೆಯ ವಿರುದ್ಧ ಮೌನ ವಹಿಸುವ ಮೂಲಕ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖ್ಯಸ್ಥ ರಕ್ಷಿತ್ ಶಿವರಾಂ ಮೋದಿ ಮೇಲೆ ವಾಕ್ ಪ್ರಹಾರ ನಡೆಸಿದ್ದಾರೆ.

ಬಿಜೆಪಿಗೆ ಬೇಟಿ ಬಚಾವೋ ಬೇಟಿ ಪಡಾವೋ ಎಂಬುದು ಕೇವಲ ಒಂದು ಚುನಾವಣಾ ಗಿಮಿಕ್ ಎನ್ನುವುದು ಇದೀಗ ಸಾಬೀತಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿಕೆ ನೀಡಿದ್ದಾರೆ. ಸಮಾಜದ ಹೆಣ್ಣು ಮಕ್ಕಳ ಬಗ್ಗೆ ಮತ್ತು ಧರ್ಮದ ಗುತ್ತಿಗೆ ಪಡೆದವರಂತೆ ವರ್ತಿಸುವ ಮೋದಿಯವರ ಈ ಮೌನ ಏನನ್ನು ಸೂಚಿಸುತ್ತದೆ ಎಂದು ಈಗ ಪ್ರಶ್ನಿಸುವಂತಾಗಿದೆ. ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಗೌರವ ಹೊಂದಿರುವ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಈ ಲೈಂಗಿಕ ಹಗರಣದ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮುಂದಾಗಿದೆ ಎಂದಿದ್ದಾರೆ ರಕ್ಷಿತ್.

“ನಮ್ಮ ದೇಶದ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಕುಟುಂಬದಲ್ಲಿ ಇಂತಹ ಕಾಮುಕರಿದ್ದಾರೆ ಎಂದು ಪೆನ್‌ಡ್ರೈವ್ ಮೂಲಕ ಸಾಬೀತಾಗಿ ಇದೀಗ ಇಡೀ ಜಗತ್ತಿಗೆ ಸಾಬೀತಾಗಿದೆ. ಜನರ ಮುಂದೆ ದಾರಿ ತಪ್ಪಿದವರಾರು ಎಂಬುದು ಈಗ ಬಯಲಾಗಿದೆ. ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ವಿರುದ್ಧ ಮಾತನಾಡುತ್ತಾ ಕುಮಾರಸ್ವಾಮಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿದ್ದಾರೆ. ಈಗ ತನ್ನ ದಾರಿ ತಪ್ಪಿದ್ದು ಹೆಣ್ಣು ಮಕ್ಕಳಲ್ಲ ಬದಲಾಗಿ ಕುಟುಂಬದ ಕುಡಿಯ ಮೂಲಕ ತನ್ನದೇ ಸ್ವಂತ ಅಣ್ಣನ ಮಗ ಎಂಬುದನ್ನು ಅವರು ಸಾಬೀತು ಪಡಿಸಿದ್ದಾರೆ ಎಂದು ರಕ್ಷಿತ್ ಶಿವರಾಂ ಗೇಲಿ ಮಾಡಿದ್ದಾರೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೀಘ್ರ ಪ್ರಕಟ, ದಿನಾಂಕ ನಿಗದಿಪಡಿಸಿಲ್ಲ-ಮಂಡಲಿ