Home News Rajeev Chandrashekar: ಈ ರಾಜ್ಯದ ಹೆಸರನ್ನು ಬದಲಾಯಿಸಿ – ಮೋದಿಗೆ ಬಿಜೆಪಿ ನಾಯಕ ಪತ್ರ

Rajeev Chandrashekar: ಈ ರಾಜ್ಯದ ಹೆಸರನ್ನು ಬದಲಾಯಿಸಿ – ಮೋದಿಗೆ ಬಿಜೆಪಿ ನಾಯಕ ಪತ್ರ

Hindu neighbor gifts plot of land

Hindu neighbour gifts land to Muslim journalist

 

Rajeev Chandrashekar : ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದ ಪ್ರಮುಖ ನಗರಗಳ, ರಸ್ತೆಗಳ ಹಾಗೂ ಏರಿಯಾ ಗಳ ಹೆಸರುಗಳನ್ನು ಬದಲಾಯಿಸುತ್ತಾ ಬಂದಿದೆ. ಈ ಬೆನ್ನಲ್ಲೇ ಇದೀಗ ಬಿಜೆಪಿಯ ನಾಯಕರು ಒಬ್ಬರು ಈ ಒಂದು ರಾಜ್ಯದ ಹೆಸರನ್ನು ಬದಲಾಯಿಸಬೇಕೆಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಹೌದು, ಭಾರತೀಯ ಜನತಾ ಪಕ್ಷದ ಕೇರಳ (Bharthiya Jantha Paksha) ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ (Rajeev Chandrashekar) ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದು, ರಾಜ್ಯದ ಅಧಿಕೃತ ಹೆಸರನ್ನು ಕೇರಳದಿಂದ (Kerala) ಕೇರಳಂ (Keralam) ಎಂದು ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ. 

ಕೇರಳ ಬದಲು ಕೇರಳಂ ಯಾಕೆ?

ರಾಜೀವ್ ಚಂದ್ರಶೇಖರ್ ಪ್ರಕಾರ, ಕೇರಳಂ ಎಂಬ ಹೆಸರು ಮಲಯಾಳಂ ಭಾಷೆ ಮತ್ತು ರಾಜ್ಯದ ಸಾಂಸ್ಕೃತಿಕ ಗುರುತಿಗೆ ಆಳವಾಗಿ ಸಂಬಂಧಿಸಿದೆ. ಯಾಕೆಂದರೆ ಮಲಯಾಳಂ ಭಾಷೆಯಲ್ಲಿ ಆ ರಾಜ್ಯವನ್ನು ಶತಮಾನಗಳಿಂದಲೂ ಕೇರಳಂ ಎಂದು ಕರೆಯಲಾಗುತ್ತಿದ್ದು, ಅದೇ ಮೂಲ ರೂಪವನ್ನು ಅಧಿಕೃತವಾಗಿ ಅಂಗೀಕರಿಸಬೇಕು ಎಂಬುದು ಅವರ ವಾದವಾಗಿದೆ. ಇದರಿಂದ ರಾಜ್ಯದ ಭಾಷಾ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಇನ್ನಷ್ಟು ಬಲಪಡಿಸಬಹುದು ಎಂದು ರಾಜೀವ್​ ಅಭಿಪ್ರಾಯಪಟ್ಟಿದ್ದಾರೆ.