Home latest ರೈಲ್ವೇ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡ 10 ತಿಂಗಳ ಪೋರಿ!

ರೈಲ್ವೇ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡ 10 ತಿಂಗಳ ಪೋರಿ!

Hindu neighbor gifts plot of land

Hindu neighbour gifts land to Muslim journalist

ರೈಲ್ವೇ ಇತಿಹಾಸದಲ್ಲಿ ಇದೊಂದು ಅತ್ಯಂತ ಕುತೂಹಲಕಾರಿ ವಿದ್ಯಮಾನವೊಂದು ನಡೆದಿದೆ. ಏನೆಂದರೆ 10 ತಿಂಗಳ ಪೋರಿಗೆ ರೈಲ್ವೇ ಉದ್ಯೋಗ ದೊರೆತಿದೆ. ಪ್ರಾಪ್ತವಯಸ್ಕರಾದ ಮೇಲೆ, ವರ್ಷಾನುಗಟ್ಟಲೆ ಓದಿ, ಒಳ್ಳೆಯ ಮಾರ್ಕ್ ಪಡೆದರೂ ಸಿಗದ ಕೆಲಸವನ್ನು10 ರ ಮಗು ಪಡೆದುಕೊಂಡಿದೆ.
ಹೌದು, ಆಗ್ನೆಯ ಕೇಂದ್ರ ರೈಲ್ವೆಯ ರಾಯಪುರ ವಿಭಾಗವು ಕೇವಲ 10 ತಿಂಗಳ ಹೆಣ್ಣು ಮಗು ರಾಧಿಕಾಳಿಗೆ ಉದ್ಯೋಗ ನೀಡಿದೆ. ರೈಲ್ವೇ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ಕುತೂಹಲಕಾರಿ ಸಂಗತಿ.

ಅಷ್ಟಕ್ಕೂ ಈ ಮಗುವಿಗೆ ನೌಕರಿ ನೀಡಿದ್ದೇಕೆ?

ರಾಜೇಂದ್ರ ಕುಮಾರ್ ಯಾದವ್ ಅವರು ಭಿಲಾಯ್‌ನ ಪಿಪಿ ಯಾರ್ಡ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಮಂದಿರ್ ಹಸೌದ್‌ನ ಚಾರೋಡದ ರೈಲ್ವೇ ಮನೆಯಲ್ಲಿ ಕುಟುಂಬ ವಾಸವಾಗಿತ್ತು. ಜೂನ್ 1ರಂದು ರಾಜೇಂದ್ರ ಕುಮಾರ್ ಮತ್ತು ಅವರ ಪತ್ನಿ ಮಂಜು ಯಾದವ್ ತಮ್ಮ ಮಗುವಿನ ಜೊತೆ ಮಂದಿರ ಹಸೌದ್‌ನಿಂದ ಭಿಲಾಯ್‌ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ಸಂದರ್ಭದಲ್ಲಿ ಮಗು ರಾಧಿಕಾ ಅಚ್ಚರಿ ರೀತಿಯಲ್ಲಿ ಬದುಕುಳಿದಿದ್ದಳು. ತಂದೆ ತಾಯಿಯ ಸಾವಿನ ನಂತರ ರಾಧಿಕಾಳನ್ನು ಅಜ್ಜಿಯೇ ಪಾಲನೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಗುವಿಗೆ 18 ವರ್ಷ ತುಂಬಿದ ಬಳಿಕ ಅನುಕಂಪದ ಆಧಾರದ ಮೇಲೆ ಇಲಾಖೆಯಲ್ಲಿ ಕೆಲಸ ನೀಡಲಾಗುವುದು. ಈ ಹೆಣ್ಣು ಮಗು ತನಗೆ 18 ವರ್ಷ ತುಂಬಿದ ನಂತರ ಕೆಲಸಕ್ಕೆ ಹಾಜರಾಗುತ್ತಾಳೆ. ಇದಕ್ಕಾಗಿ ಮಗುವಿನ ದಾಖಲಾತಿ ಪ್ರಕ್ರಿಯೆ ರೈಲ್ವೇ ಇಲಾಖೆಯಿಂದ ನಡೆದಿದೆ. ಅದಕ್ಕಾಗಿ ಈಗಲೇ ತಯಾರಿ ನಡೆದಿದೆ. ಮುಂದಕ್ಕೆ ಬೇರೆ ಯಾರೋ ಬಂದು ಕ್ಲೇಮ್ ಮಾಡುವುದನ್ನು ತಪ್ಪಿಸಲು ಮತ್ತು ಮಗುವಿಗೆ ಮೋಸ ಆಗದಂತಿರಲು ಈಗಲೇ ಮಗುವಿನ ಹೆಬ್ಬೆಟ್ಟಿನ ಗುರುತು ಪಡೆದುಕೊಂಡಿದೆ ರೈಲ್ವೆ ಇಲಾಖೆ. ಈ ಸಂದರ್ಭದಲ್ಲಿ ಹಿರಿಯ ವಿಭಾಗೀಯ ಸಿಬ್ಬಂದಿ ಉದಯ್ ಕುಮಾರ್ ಭಾರ್ತಿ ಮಗುವಿನ ಹೆಬ್ಬೆರಳ ಗುರುತು ಪಡೆಯುತ್ತಿರುವ ಕ್ಷಣ ಮನಮುಟ್ಟುವಂತಿತ್ತು.