Home News Raichuru: ಕುರಿ ಹಿಂಡಿನ ಮೇಲೆ ಖಾಸಗಿ ಬಸ್ ಹರಿದು ಬರೋಬ್ಬರಿ 150 ಕುರಿಗಳ ಮಾರಣಹೋಮ !!

Raichuru: ಕುರಿ ಹಿಂಡಿನ ಮೇಲೆ ಖಾಸಗಿ ಬಸ್ ಹರಿದು ಬರೋಬ್ಬರಿ 150 ಕುರಿಗಳ ಮಾರಣಹೋಮ !!

Hindu neighbor gifts plot of land

Hindu neighbour gifts land to Muslim journalist

Raichuru: ರಾಯಚೂರಿನ ಹೊರವಲಯದ ಯರಮರಸ್ ಬೈಪಾಸ್​ನಲ್ಲಿ ಖಾಸಗಿ ಬಸ್ ಹರಿದು 125 ಕುರಿಗಳು ಮೃತಪಟ್ಟಿರುವ ವಿಚಿತ್ರ ಘಟನೆ ನಡೆದಿದೆ.

ಹೌದು, ಗುರುವಾರ ಬೆಳಗಿನ ಜಾವ ತೆಲಂಗಾಣದ ನಾರಾಯಪೇಟೆ, ಹೊಳಪುರ ಮೂಲದ ಕುರಿಗಾಹಿಗಳು ಕುರಿ ಹೊಡೆದುಕೊಂಡು ಹೊಗುವಾಗ ವೇಗದಲ್ಲಿ ಬಂದ ಬಸ್ ಮೇಲೆ ಹರಿದಿದೆ. ಪರಿಣಾಮ 150ಕ್ಕೂ ಅಧಿಕ ಕುರಿಗಳು ಸ್ಥಳದಲ್ಲೇ ಅಪ್ಪಚ್ಚಿಯಾದರೆ 30 ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ. ಗಂಟೆ ಮಲ್ಲೇಶ, ಪೂಜಾರಿ ಚಿನ್ನಪ್ಪ, ಬಾಲರಾಜ್ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಬಸ್ ಚಾಲಕನಿಗೆ ಬ್ಯಾಟರಿ ಹಾಕಿ ಎಚ್ಚರಿಸಿದರೂ ಗಮನಿಸಿಲ್ಲ. 500 ಕುರಿಗಳಿದ್ದು, ಉಳಿದು ಕುರಿಗಳು ಬೆದರಿ ರಸ್ತೆ ಪಕ್ಕಕ್ಕೆ ಸರಿದಿವೆ ಎಂದು ಕುರಿಗಾಹಿ ತಿಳಿಸಿದ್ದಾರೆ.

ಅಂದಹಾಗೆ ಹೈದರಾಬಾದ್​ ನಿಂದ ಬೆಳಗಾವಿ(Belagavi) ಕಡೆ ಬಸ್ ಚಲಿಸುತ್ತಿತ್ತು. ಇದೇ ಸಂದರ್ಭದಲ್ಲಿ ತೆಲಂಗಾಣದ ಮಕ್ತಲ್ ಬಳಿಯ ಓಬಳಾಪುರಂ ಗ್ರಾಮದ ಮಲ್ಲೇಶ್, ಸೀನಪ್ಪ ಮತ್ತು ಬಾಲರಾಜು ಎಂಬವರಿಗೆ ಸೇರಿದ 150 ಕ್ಕೂ ಹೆಚ್ಚು ಕುರಿಗಳು ತೆಲಂಗಾಣದಿಂದ ರಾಯಚೂರು ಮಾರ್ಗವಾಗಿ ಬರುತ್ತಿದ್ದವು. ಇತ್ತ ಚಾಲಕನ‌ ನಿಯಂತ್ರಣ ತಪ್ಪಿದ ಬಸ್, ಕುರಿಗಳ ಹಿಂಡಿನ ಮೇಲೆ ಹರಿದಿದೆ. ಘಟನೆಯಲ್ಲಿ 125 ಕುರಿಗಳು ಮೃತಪಟ್ಟಿದ್ದು, 18 ಕುರಿಗಳ ಸ್ಥಿತಿ ಗಂಭೀರವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಖಾಸಗಿ ಬಸ್ ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರದಲ್ಲಿ ಹೆದ್ದಾರಿ ಪಕ್ಕದಲ್ಲೇ ಜೆಸಿಬಿಯಿಂದ ಗುಂಡಿ ಅಗೆದು ಕುರಿಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಸ್ಥಳಕ್ಕೆ ಸ್ಥಳೀಯ ಪಶು ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನಾರಾಯಣ ಪೇಟೆ ಶಾಸಕ, ಅಲ್ಲಿನ ಪಶು ಅಧಿಕಾರಿಗಳು ಬಂದು ಮಾಹಿತಿ ಪಡೆದಿದ್ದಾರೆ.