Home News Raghaveshwara Statement: ಜನಿವಾರ ತೆಗೆಸಿಕೊಂಡ ವಿದ್ಯಾರ್ಥಿಗಳ ಕುರಿತು ರಾಘವೇಶ್ವರ ಹೇಳಿಕೆ!

Raghaveshwara Statement: ಜನಿವಾರ ತೆಗೆಸಿಕೊಂಡ ವಿದ್ಯಾರ್ಥಿಗಳ ಕುರಿತು ರಾಘವೇಶ್ವರ ಹೇಳಿಕೆ!

Hindu neighbor gifts plot of land

Hindu neighbour gifts land to Muslim journalist

Raghaveshwara Statement: ಸಿಇಟಿ ಪರೀಕ್ಷೆಯಲ್ಲಿ ನಡೆದ ಜನಿವಾರ ತೆಗೆಸಿದ ಘಟನೆಯನ್ನು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಖಂಡನೆ ಮಾಡಿದ್ದಾರೆ.

ಬಟ್ಟೆಯ ಬಟ್ಟೆಯ ಒಳಗೆ ಧರಿಸುವ ಜನಿವಾರದಿಂದ ಪರೀಕ್ಷಾ ನಿಯಮಕ್ಕೆ ಯಾವ ತೊಂದರೆಯೂ ಇಲ್ಲ. ಈ ಘಟನೆ ಹಿಂದೆ ಕೇವಲ ದ್ವೇಷದ ಜ್ವಾಲೆ ಕಾಣುತ್ತದೆ. ಬ್ರಾಹ್ಮಣರು ಜನಿವಾರ ಧರಿಸಿದರೆ, ವೀರಶೈವರು ಲಿಂಗ ಧರಿಸುತ್ತಾರೆ. ಇಂದು ಬ್ರಾಹ್ಮಣ ಜನಾಂಗದ ಮೇಲೆ ಆಗುತ್ತಿರುವ ಕ್ರೌರ್ಯ ನಾಳೆ ಬೇರೆ ಸಮಾಜದ ಮೇಲೂ ಆಗಬಹುದು. ಹಾಗಾಗಿ, ಸಮಸ್ತ ಹಿಂದೂ ಸಮಾಜ ಇಂತಹ ಕೃತ್ಯಗಳನ್ನು ಖಂಡಿಸಬೇಕು ಎಂದರು.

ಧಾರ್ಮಿಕತೆಯ ಜೊತೆಗೆ ರಾಜಿ ಮಾಡಿಕೊಳ್ಳದೆ, ಪರೀಕ್ಷೆಯನ್ನೇ ತಿರಸ್ಕರಿಸಿದ ವಿದ್ಯಾರ್ಥಿಯ ಧೋರಣೆ ಮೆಚ್ಚುವಂತದ್ದು. ಆ ವಿದ್ಯಾರ್ಥಿಯ ಜೊತೆಗೆ ರಾಮಚಂದ್ರಾಪುರ ಮಠವಿರಲಿದ್ದು, ಅಗತ್ಯವಾದ ಎಲ್ಲ ರೀತಿಯ ಸಹಕಾರವನ್ನು ಮಠದಿಂದ ನೀಡಲಾಗುವುದು ಎಂದು ಶ್ರೀಗಳು ಹೇಳಿದ್ದಾರೆ ಎಂದು ವರದಿಯಾಗಿದೆ.