

Kottayam: ಕೇರಳದ ಕೊಟ್ಟಾಯಂನಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳನ್ನು ಬಹಳ ಕ್ರೂರವಾಗಿ ರ್ಯಾಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರಿ ಕಾಲೇಜಿನ ಪ್ರಾಂಶುಪಾಲ ಮತ್ತು ಸಹಾಯಕ ಪ್ರಾಧ್ಯಾಪಕರನ್ನು ಅಮಾನತು ಮಾಡಲಾಗಿದೆ.
ಅಂತಿಮ ವರ್ಷದ ಐವರು ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ನಗ್ನಗೊಳಿಸಿ ಮರ್ಮಾಂಗಕ್ಕೆ ಕಬ್ಬಿಣದ ಡಂಬಲ್ಸ್‌ಗಳನ್ನು ಹಾಕಿ ನೇತಾಡಿಸುವುದು, ಕಂಪಾಸ್‌ನ ಮೊನಚಾದ ತುದಿಗಳಿಂದ ಮೈ ಮೇಲೆಲ್ಲಾ ಚುಚ್ಚಿ ಹಿಂಸಾ ಪ್ರವೃತ್ತಿ ಮೆರೆಯುತ್ತಿರುವ ಘಟನೆ ನಡೆದಿತ್ತು. ಇದೆಲ್ಲ ತಿಳಿದಿದ್ದರೂ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಇಬ್ಬರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ.
ಪ್ರಾಂಶುಪಾಲರಾದ ಸುಲೇಖಾ ಮತ್ತು ಸಹಾಯಕ ಪ್ರಾಧ್ಯಾಪಕ ಜಾರ್ಜ್ ಅಜೀಶ್ ಅಮಾನತುಗೊಂಡಿದ್ದಾರೆ.













