Home News R B Timmapura: ಮದ್ಯದ ಅಂಗಡಿ ಹರಾಜು ಪ್ರಕ್ರಿಯೆಯಲ್ಲೂ ಮೀಸಲಾತಿ- ಅಬಕಾರಿ ಸಚಿವರಿಂದ ಬಿಗ್ ಅಪ್ಡೇಟ್

R B Timmapura: ಮದ್ಯದ ಅಂಗಡಿ ಹರಾಜು ಪ್ರಕ್ರಿಯೆಯಲ್ಲೂ ಮೀಸಲಾತಿ- ಅಬಕಾರಿ ಸಚಿವರಿಂದ ಬಿಗ್ ಅಪ್ಡೇಟ್

Hindu neighbor gifts plot of land

Hindu neighbour gifts land to Muslim journalist

R B Timmapura: ಅವಧಿ ಮುಗಿದಿರೋ ಮದ್ಯದ ಅಂಗಡಿಗಳನ್ನ ಹರಾಜು ಮೂಲಕ ಹಂಚಿಕೆ ಮಾಡುವ ಪ್ರಕ್ರಿಯೆ ಶುರುವಾಗಿದ್ದು, ಇದರಲ್ಲೂ ಮೀಸಲಾತಿ ತರುವ ಕುರಿತು ಅಬಕಾರಿ ಸಚಿವರು ಸುಳಿವು ನೀಡಿದ್ದಾರೆ.

ಹೌದು, ಹರಾಜು ಮೂಲಕ ಹಂಚಿಕೆ ಮಾಡುವ ಪ್ರಕ್ರಿಯೆ ಶುರುವಾಗಿದ್ದು, ಕರಡು ನಿಯಮ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ್ ತಿಳಿಸಿದ್ದಾರೆ. ಅಲ್ಲದೆ ಅವರು ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ಕೊಡಬೇಕು ಎಂದು ಅಂದುಕೊಳ್ಳಲಾಗಿದೆ. ಈಗಾಗಲೇ ಹರಾಜು ಪ್ರಕ್ರಿಯೆಯ ಕರಡು ನಿಯಮ ಸಿದ್ಧವಾಗಿದ್ದು, ಸಹಿ ಕೂಡಾ ಆಗಿದೆ. ಆದಷ್ಟೂ ಬೇಗ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

ಇದನ್ನೂ ಓದಿ:S L Bhyrappa: ಯಾವ ಕಾರಣಕ್ಕೂ ಪುತ್ರರು ಬೇಡ, ಮಗಳಂತಿರುವ ಸಹನಾ ನನ್ನ ಅಂತ್ಯಕ್ರಿಯೆ ಮಾಡಲಿ – ಭೈರಪ್ಪ ಬರೆಸಿದ್ದು ಎನ್ನಲಾದ ವಿಲ್ ವೈರಲ್?

ಅಲ್ಲದೆ ಸಾಮಾನ್ಯವಾಗಿ ಹರಾಜು ಹಾಕಬೇಕಾ? ಮೀಸಲಾತಿ ಕೊಡಬೇಕಾ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಾಳೆ ಚರ್ಚೆ ಮಾಡ್ತೀನಿ. ಹರಾಜು ಪ್ರಕ್ರಿಯೆಯಿಂದ 2 ಸಾವಿರ ಕೋಟಿ ರೂ. ಲಾಭ ಬರಬಹುದು ಅಂತ ನಿರೀಕ್ಷೆ ಇದೆ. ಮೀಸಲಾತಿ ಕೊಟ್ಟರೆ ನೆರವಾಗುತ್ತದೆ ಅಂತ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಹೊಸ ಲೈಸೆನ್ಸ್ ಕೊಡಲ್ಲ. ಈಗ ಯಾವುದು ಇದೆಯೋ ಅದಕ್ಕೆ ಮಾತ್ರ ಹರಾಜು ಮೂಲಕ ಲೈಸೆನ್ಸ್ ಕೊಡ್ತೀವಿ ಎಂದು ತಿಳಿಸಿದರು.