Home News Home Minister: ತಿಮರೋಡಿಯಿಂದ ಸಿಎಂ ಕೊಲೆಗಾರ ಎಂಬ ಹೇಳಿಕೆ ವಿಚಾರ – ಗೃಹಸಚಿವ – ದಕ್ಷಿಣ...

Home Minister: ತಿಮರೋಡಿಯಿಂದ ಸಿಎಂ ಕೊಲೆಗಾರ ಎಂಬ ಹೇಳಿಕೆ ವಿಚಾರ – ಗೃಹಸಚಿವ – ದಕ್ಷಿಣ ಕನ್ನಡ ಎಸ್ ಪಿ ಎಸ್ ಕೆ ಅರುಣ್ ಭೇಟಿ

Hindu neighbor gifts plot of land

Hindu neighbour gifts land to Muslim journalist

Home Minister: ತಿಮರೋಡಿಯಿಂದ ಸಿಎಂ ಕೊಲೆಗಾರ ಎಂಬ ಹೇಳಿಕೆ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಬೆಳವಣಿಗೆ ಚುರುಕುಗೊಂಡಿದೆ. ತಿಮರೋಡಿ ವಿರುದ್ದ ಕ್ರಮಕ್ಕೆ ಸರ್ಕಾರದಿಂದ ತಯಾರಿ ನಡೆಯುತ್ತಿದೆ ಎನ್ನಲಾಗುತ್ತಿದೆ.

ಈಗಾಗಲೆ ಗೃಹ ಸಚಿವ ಪರಮೇಶ್ವರ್‌ ದಕ್ಷಿಣ ಕನ್ನಡ ಎಸ್ ಪಿ ಎಸ್ ಕೆ ಅರುಣ್ ಅವರನ್ನು ವಿಧಾನಸೌಧಕ್ಕೆ ಕರೆಸಿಕೊಂಡಿದ್ದಾರೆ. ತಿಮರೋಡಿ ವಿರುದ್ದ ಮುಂದಿನ ಕ್ರಮದ ಕುರಿತು ಗೃಹಸಚಿವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಎಸ್ ಪಿ ಎಸ್ ಕೆ ಅರುಣ್ ದಾಖಲೆಗಳೊಂದಿಗೆ ಗೃಹಸಚಿವರಿಗೆ ಈ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸದನ ಆರಂಭಕ್ಕೂ ಮುನ್ನ ಗೃಹ ಸಚಿವರೊಂದಿಗೆ ಎಸ್‌ಪಿ ಚರ್ಚೆ ನಡೆಸಿದದ್ದಾರೆ.

ಇದಲ್ಲದೆ ಹಲವು ಪ್ರಕರಣದಲ್ಲಿ ತಿಮರೋಡಿ ಆರೋಪಿಯಾಗಿದ್ದು, ದಾಖಲೆಯಿಲ್ಲದೇ ವಿವಾದಾತ್ಮಕ ಹೇಳಿಕೆಯನ್ನು ತಿಮರೋಡಿ ನೀಡಿದ್ದಾರೆ ಎಂದು ನಿನ್ನೆ ಸದನದಲ್ಲಿ ವಿರೋಧ ಪಕ್ಷದ ನಾಯಕರು ಗದ್ದಲ ಎಬ್ಬಿಸಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಹೀಗಾಗಿ ನಿನ್ನೆ ಗೃಹಸಚಿವರು ಮಹೇಶ್‌ ತಿಮರೋಡಿ ವಿರುದ್ಧ ಕ್ರಮದ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಾವ ರೀತಿ ಕ್ರ‌ಮ ಆಗಬೇಕು ಎಂದು ದ.ಕ ಎಸ್ಪಿ ಜೊತೆ ಚರ್ಚೆ ನಡೆಸಿದ್ದಾರೆ ಗರಹಸಚಿವರು.

Rishi Sunak: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ತಂದೆ-ತಾಯಿ ಮೈಸೂರು ಭೇಟಿ – ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ದರ್ಶನ