Home News ಪುತ್ತೂರು : ರೆಸ್ಟೋರೆಂಟ್‌ನಲ್ಲಿ ಬೆಂಗಳೂರಿನ ಹಿಂದೂ ಯುವತಿ, ಹಿಂದೂ ಮುಸ್ಲಿಂ ಯುವಕರಿಬ್ಬರಿದ್ದ ಮಾಹಿತಿ:ಪೊಲೀಸರಿಂದ ವಿಚಾರಣೆ

ಪುತ್ತೂರು : ರೆಸ್ಟೋರೆಂಟ್‌ನಲ್ಲಿ ಬೆಂಗಳೂರಿನ ಹಿಂದೂ ಯುವತಿ, ಹಿಂದೂ ಮುಸ್ಲಿಂ ಯುವಕರಿಬ್ಬರಿದ್ದ ಮಾಹಿತಿ:ಪೊಲೀಸರಿಂದ ವಿಚಾರಣೆ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಬೆಂಗಳೂರಿನ ಹಿಂದೂ ಯುವತಿ, ಯುವಕ ಮತ್ತು ಮುಸ್ಲಿಂ ಧರ್ಮದ ಯುವಕ ಬೈಪಾಸ್ ರಸ್ತೆಯ ಪ್ರತಿಷ್ಠಿತ ಹೊಟೇಲೊಂದರಲ್ಲಿ ಕಳೆದ ಮೂರು ದಿನಗಳಿಂದ ರೂಮ್ ಮಾಡಿ ತ೦ಗಿದ್ದ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ ಮತ್ತು ಸ್ಥಳಕ್ಕೆ ತೆರಳಿದ ಪೊಲೀಸರು ಹೊಟೇಲ್ ರೆಸ್ಟೋರೆಂಟ್‌ನಲ್ಲಿದ್ದ ಮೂವರನ್ನು ಠಾಣೆಗೆ ಕರೆದೊಯ್ದ ಘಟನೆ ಸೆ.20ರಂದು ಸಂಜೆ ನಡೆದಿದೆ.

ಬೆಂಗಳೂರಿನ ರೋ ರೂಮ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಯುವತಿ ಪುತ್ತೂರಿನ ಬೈಪಾಸ್ ರಸ್ತೆಯ ಹೋಟೆಲ್ ರೆಸ್ಟೋರೆಂಟ್‌ನಲ್ಲಿ ಕಳೆದ ಮೂರು ದಿನಗಳಿಂದ ಈ ತಂಗಿದ್ದು, ಅದೇ ರೂಮ್‌ನಲ್ಲಿ ಓರ್ವ ಹಿಂದೂ ಯುವಕ ಮತ್ತು ಮುಸ್ಲಿಂ ಯುವಕನೋರ್ವ ಜನ ಇರುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೋಟೆಲ್‌ಗೆ ತೆರಳಿದಾಗ ಯುವತಿ ಮತ್ತು ಇಬ್ಬರು ಯುವಕರು ಅಲ್ಲಿನ ರೆಸ್ಟೋರೆಂಟ್‌ನಲ್ಲಿ ಉಪಹಾರ ಸೇವಿಸುತ್ತಿದ್ದರು.

ಇದೇ ಸಂದರ್ಭ ಪೊಲೀಸರೂ ಸ್ಥಳಕ್ಕೆ ಆಗಮಿಸಿ ಯುವತಿ ಮತ್ತು ಜೊತೆಗಿದ್ದ ಇಬ್ಬರು ಯುವಕರನ್ನು ಠಾಣೆಗೆ ಕರೆದೊಯ್ದಿದ್ದಾರೆ.ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರು ಯುವತಿ ಸೇರಿದಂತೆ ಮೂವರನ್ನೂ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಸತಿಗೃಹಕ್ಕೆ ಬಂದವರ ವಿಳಾಸ ದಾಖಲಿಸುವಂತೆ ಹಿಂಜಾವೇ ಆಗ್ರಹ

ಪುತ್ತೂರಿನ ವಸತಿಗೃಹಕ್ಕೆ ಹೊರಗಡೆಯಿಂದ ಅನೇಕರು ಬರುತ್ತಾರೆ.ಆದರೆ ಅವರ ಆಧಾರ್‌ ಕಾರ್ಡ್ ಆಧಾರದಲ್ಲಿ ವಿಳಾಸ ದಾಖಲಿಸುತ್ತಿಲ್ಲ ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಎಲ್ಲಾ ವಸತಿ ಈ ಗೃಹಗಳಿಗೆ ತಂಗಲು ಬರುವ ಗ್ರಾಹಕರ ಸರಿಯಾದ ದಾಖಲೆ ಇಟ್ಟುಕೊಳ್ಳುವಂತೆ ಮತ್ತು ಪೊಲೀಸರು ಈ ಕುರಿತು ಆಗಾಗ್ಗೆ ಪರಿಶೀಲನೆ ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ಹೊಸಮನೆ ತಿಳಿಸಿದ್ದಾರೆ.

https://hosakannada.com/2021/09/21/nekkilady-person-in-ugrajaala/