Home News Puttur: ನ.2 ಪುತ್ತೂರಿನಲ್ಲಿ ಅಶೋಕ‌ ಜನ-ಮನ; ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಆಗಮನದ ನಿರೀಕ್ಷೆ

Puttur: ನ.2 ಪುತ್ತೂರಿನಲ್ಲಿ ಅಶೋಕ‌ ಜನ-ಮನ; ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಆಗಮನದ ನಿರೀಕ್ಷೆ

Hindu neighbor gifts plot of land

Hindu neighbour gifts land to Muslim journalist

Puttur: ನ.2 ರಂದು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ಸ್ ಎಜುಜೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ದೀಪಾವಳಿ ಪ್ರಯುಕ್ತ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ‌ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ‌ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಯಿತು.

ಬೆಂಗಳೂರಿನಲ್ಲಿ ಇಬ್ಬರನ್ನೂ ಭೇಟಿಯಾದ ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿನ ಐತಿಹಾಸಿಕ ಈ ಕಾರ್ಯಕ್ರಮಕ್ಕೆ ಬಂದು ಹಾರೈಸುವಂತೆ ಮನವಿ ಮಾಡಿದರು.

ಕಾರ್ಯಕ್ರಮಕ್ಕೆ ಬರುವುದಾಗಿ ಇಬ್ಬರೂ ಭರವಸೆ ನೀಡಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ವರ್ಷಂಪ್ರತಿ ದೀಪಾವಳಿ ಪ್ರಯುಕ್ತ ನಡೆಯುವ ವಸ್ತ್ರದಾನ ಹಾಗೂ ಸಹಭೋಜನ ಕಾರ್ಯಕ್ರಮದಲ್ಲಿ ಈ ಬಾರಿ 75000 ಮಿಕ್ಕಿ ಮಂದಿಗೆ ವಸ್ತ್ರದಾನ ನಡೆಯಲಿದೆ. ಬಹಳ ಅದ್ದೂರಿಯಾಗಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಪ್ರಮುಖ ರಾಜಕೀಯ ನೇತಾರರು‌ ಭಾಗವಹಿಸಲಿದ್ದಾರೆ.