Home News Puttur: ಪುತ್ತೂರು: ಮದುವೆ ವಂಚನೆ ಪ್ರಕರಣ: ಸಂತ್ರಸ್ತೆಯ ಜೀವಭಯದ ಮನವಿಗೆ ಸ್ಪಂದಿಸಿದ ಪೊಲೀಸ್‌ ಇಲಾಖೆ, ಸಿಸಿ...

Puttur: ಪುತ್ತೂರು: ಮದುವೆ ವಂಚನೆ ಪ್ರಕರಣ: ಸಂತ್ರಸ್ತೆಯ ಜೀವಭಯದ ಮನವಿಗೆ ಸ್ಪಂದಿಸಿದ ಪೊಲೀಸ್‌ ಇಲಾಖೆ, ಸಿಸಿ ಕ್ಯಾಮೆರಾ ಅಳವಡಿಕೆ, ನಿತ್ಯ ಪೊಲೀಸ್‌ ಭೇಟಿ

Hindu neighbor gifts plot of land

Hindu neighbour gifts land to Muslim journalist

Puttur: ಪುತ್ತೂರು: ಬಪ್ಪಳಿಗೆ ನಿವಾಸಿ ಕೃಷ್ಣರಾವ್‌ ಎಂಬಾತನಿಂದ ವಂಚನೆಗೊಳಗಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತೆ ತಮಗೆ, ತಮ್ಮ ಮಗುವಿಗೆ ಜೀವ ಬೆದರಿಕೆ ಇದೆ ಎಂದು ರಕ್ಷಣೆ ಕೋರಿ ಸಲ್ಲಿಸಿದ್ದ ಮನವಿಗೆ ಪೊಲೀಸ್‌ ಇಲಾಖೆ ಸ್ಪಂದನೆ ಮಾಡಿದೆ.

ಸಂತ್ರಸ್ತೆ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಈ ಬೆನ್ನಲ್ಲೇ ಮನೆಯ ಸುತ್ತ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ರಾತ್ರಿ ಸಮಯದಲ್ಲಿ ಇವರ ಚಲನವಲನ ಕಂಡು ಬರುತ್ತಿದ್ದು, ಇದರಿಂದ ತೀವ್ರ ಭಯವಾಗಿದ್ದು ಎನ್ನುವುದಾಗಿ ಐಜಿಪಿಗೆ ದೂರನ್ನು ಈಕೆ ನೀಡಿದ್ದರು.

ಪಶ್ಚಿಮ ವಲಯ ಐಜಿಪಿ ಅಮಿತ್‌ಸಿಂಗ್‌ ಅವರ ಸೂಚನೆಯ ಅನ್ವಯ ಪುತ್ತೂರು ನಗರ ಠಾಣೆಯ ಪೊಲೀಸರು ಪ್ರತಿದಿನ ಮನೆಗೆ ಭೇಟಿ ನೀಡಿ, ಸಂತ್ರಸ್ತೆ ಮತ್ತು ಅವರ ಕುಟುಂಬದವರೊಂದಿಗೆ ಮಾತನಾಡಿ, ಧೈರ್ಯ ತುಂಬುವ ಹಾಗೂ ಭದ್ರತಾ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಹೈ -ರೆಸ್ಯೂಲ್ಯೂಶನ್‌ ಅನ್ನು ಸಂತ್ರಸ್ತೆಯ ಮನೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

Dharmasthala Case: ಧರ್ಮಸ್ಥಳ ತಲೆಬುರುಡೆ ಪ್ರಕರಣ: ಸ್ಪೀಕರ್‌ ಭೇಟಿಯಾದ ಗೃಹ ಸಚಿವ ಪರಮೇಶ್ವರ್‌