Home News Puttur: ಪುತ್ತೂರು: ಅಶೋಕ ಜನಮನದಲ್ಲಿ ಉಡುಗೊರೆ ಸಿಗದವರಿಗೆ ಗ್ರಾಮಗಳಿಗೆ ತೆರಳಿ ಉಡುಗೊರೆ ವಿತರಣೆ

Puttur: ಪುತ್ತೂರು: ಅಶೋಕ ಜನಮನದಲ್ಲಿ ಉಡುಗೊರೆ ಸಿಗದವರಿಗೆ ಗ್ರಾಮಗಳಿಗೆ ತೆರಳಿ ಉಡುಗೊರೆ ವಿತರಣೆ

Ashok kumar Rai

Hindu neighbor gifts plot of land

Hindu neighbour gifts land to Muslim journalist

Puttur: ಅ.20ರಂದು ಪುತ್ತೂರು ಶಾಸಕ ಅಶೋಕ್ ರೈನೇತೃತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಅಶೋಕ ಜನಮನ 2025 ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕ ಬಂಧುಗಳಿಗೆ ವಸ್ತ್ರ ಹಾಗೂ ಉಡುಗೋರೆಯನ್ನು ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಜನ ಹಾಗೂ ವಿಪರೀತ ಮಳೆಯ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ಹಲವಾರು ಮಂದಿ ಉಡುಗೊರೆ ಪಡೆಯಲು ಸಾಧ್ಯವಾಗದೆ ಮರಳಿದ್ದಾರೆ. ಹಲವು ಮಂದಿ ಸುಮಾರು ಹೊತ್ತಿನ ವರೆಗೆ ಕಾದರೂ ಜನಸಂದಣಿಯ ನಡುವೆ ಉಡುಗೋರೆ ಪಡೆಯಲು ಸಾಧ್ಯವಾಗದೆ ಇರುವ ಕಾರಣದಿಂದ ಈ ಉಡುಗೋರೆಯನ್ನು ಪ್ರತೀ ಗ್ರಾಮಕ್ಕೆ ತೆರಳಿ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಕೋಡಿಂಬಾಡಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾಣ ಕೈಗೊಳ್ಳಲಾಗಿದೆ.ನವೆಂಬರ್ 19 ರಂದು ಪ್ರಾರಂಭಿಕ ಹಂತವಾಗಿ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಉಡುಗೋರೆ ವಿತರಿಸಲು ತೀರ್ಮಾನ ಮಾಡಲಾಗಿದೆ. ಈ ಉಡುಗೊರೆ ವಿತರಣೆಗೆ ಯಾವುದೇ ಜಾತಿ, ಧರ್ಮ, ಪಕ್ಷ, ಹಾಗೂ ಬಡವ-ಬಲ್ಲಿದ ಎಂಬ ನಿರ್ಬಂಧವಿರುವುದಿಲ್ಲ. ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಸ್ಥರನ್ನು ಹೊರತುಪಡಿಸಿ ಬೇರೆ ಗ್ರಾಮದವರಿಗೆ ಇಲ್ಲಿ ಅವಕಾಶವಿಲ್ಲ. ಪುರಾವೆಗಾಗಿ ಆಧಾರ್ ಕಾರ್ಡ್ ಅಥವಾ ಓಟರ್ ಐಡಿಯನ್ನು ಕಡ್ಡಾಯವಾಗಿ ತರಬೇಕಾಗಿದೆ ಗ್ರಾಮದ ಪ್ರತೀ ಮನೆಯ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲಾ ಸದಸ್ಯರಿಗೂ ಅವಕಾಶವಿರುತ್ತದೆ.ಕಾರ್ಯಕ್ರಮದ ಸಂದರ್ಭ ಸ್ಥಳದಲ್ಲಿ ಉಪಸ್ಥಿತರಿಗೆ ಮಾತ್ರ ಜನಮನ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಜನ ಮತ್ತು ವಿಪರೀತ ಮಳೆಯ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ಹಲವಾರು ಮಂದಿಗೆ ಉಡುಗೋರೆ ನೀಡಲು ಸಾಧ್ಯವಾಗಿಲ್ಲ, ಈ ಬಗ್ಗೆ ನಾನು ವಿಷಾಧವನ್ನೂ ವ್ಯಕ್ತಪಡಿಸಿ, ಉಡುಗೊರೆ ಸರಿಯಾಗಿ ವಿತರಣೆಯಾಗದ ಕಾರಣ ಗ್ರಾಮ ಗ್ರಾಮಕ್ಕೆ ತೆರಳಿ ಉಡುಗೋರೆ ವಿತರಣೆ ಮಾಡುವುದಾಗಿ ಹೇಳಿದ್ದೆ. ಇದೀಗ ಆರಂಭಿಕವಾಗಿ ನ.19 ಕ್ಕೆ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಸ್ಥರಿಗೆ ಉಡುಗೋರೆ ವಿತರಿಸಲು ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮದಲ್ಲೂ ಉಡುಗೋರೆ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.