Home News Puttur: ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೇಮಕ

Puttur: ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೇಮಕ

Hindu neighbor gifts plot of land

Hindu neighbour gifts land to Muslim journalist

Puttur: ಪುತ್ತೂರು (Puttur) ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಗೆ ಸದಸ್ಯರನ್ನು ನೇಮಕಗೊಳಿಸಲಾಗಿದೆ. ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಶಿವರಾಮ ಭಟ್ ಬಾವಾ ಪುನರಾಯ್ಕೆಯಾಗಿದ್ದಾರೆ.

ಇನ್ನು ನೂತನ ಸಮಿತಿ ಸದಸ್ಯರಾಗಿ ಅರ್ಚಕ ಸ್ಥಾನದಿಂದ ಪ್ರಧಾನ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ, ಪ.ಜಾತಿ, ಪ.ಪಂಗಡ ಸ್ಥಾನದಿಂದ ಚಂದ್ರಶೇಖರ ಪಲಸಡ್ಕ, ಮಹಿಳಾ ಸ್ಥಾನದಿಂದ ಜಾನಕಿ ಹೊಸಮನೆ, ಲೀಲಾವತಿ, ಸಾಮಾನ್ಯ ಸ್ಥಾನದಿಂದ ವಿಶ್ವನಾಥ ಆ‌ರ್.ಗುತ್ತು, ನಾರಾಯಣ ರೈ ವೀರಮಂಗಲ, ಬೆಳಿಯಪ್ಪ ಗೌಡ ಪೆಲತ್ತಡಿ, ರಾಜೇಶ್ ಪೆಲತ್ತಡಿ, ಶಿವರಾಮ ಭಟ್ ಬಾವಾರವರನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು, ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.