Home News Dharmasthala Case: ದೂರುದಾರನ ಮಂಪರು ಪರೀಕ್ಷೆಗೆ ಒಳಪಡಿಸಿ – ಯ್ಯೂಟೂಬರ್ಸ್‌ನ ತನಿಖೆಗೆ ಒಳಪಡಿಸಿ – ಮತ್ತದೇ...

Dharmasthala Case: ದೂರುದಾರನ ಮಂಪರು ಪರೀಕ್ಷೆಗೆ ಒಳಪಡಿಸಿ – ಯ್ಯೂಟೂಬರ್ಸ್‌ನ ತನಿಖೆಗೆ ಒಳಪಡಿಸಿ – ಮತ್ತದೇ ಸೀಟಿ ಊದುತ್ತಿರುವ ಸಿ. ಟಿ ರವಿ

Hindu neighbor gifts plot of land

Hindu neighbour gifts land to Muslim journalist

Dharmasthala Case: ನಿನ್ನೆ ಸದನದಲ್ಲಿ ಅಷ್ಟೆಲ್ಲಾ ಸರ್ಕಾರ ಧರ್ಮಸ್ಥಳ ಪ್ರಕರಣ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೆ ಬಿಜೆಪಿ ಅವರ ನಾಯಕ ಹೇಳಿದ ಹೇಳಿಕೆಯನ್ನು ಹಿಡಿದುಕೊಂಡು ಇಡೀ ಸದನದ ಸಮಯನ್ನು ಹಾಳು ಮಾಡಿದೆ. ಗೃಹ ಸಚಿವರು ಅವರ ವ್ಯಾಪ್ತಿಗೆ ಎಷ್ಟು ಮಾಹಿತಿ ಕೊಡಬಹುದೋ ಅಷ್ಟೆಲ್ಲಾ ನಿನ್ನೆ ಕೊಟ್ಟಿದ್ದಾರೆ. ಇದು ಕಾನೂನು ಪ್ರಕ್ರಿಯೆ. ನಡಿತಾ ಇದೆ. ಎಸ್‌ಐಟಿ ವರದಿ ಕೊಡುವವರೆಗೆ ತಾಳ್ಮೆಯಿಂದ ಕಾಯಿರಿ ಎಂದು ವಿರೋಧ ಪಕ್ಷದ ನಾಯಕರಿಗೆ ಹೇಳಿದ್ದಾರೆ. ಆದರು ಇಂದು ಮತ್ತದೇ ರಾಗ ಹಾಡಲು ಆರಂಭಿಸಿದ್ದಾರೆ ಬಿಜೆಪಿ ನಾಯಕರು.

ವ್ಯಕ್ತಿಗತವಾಗಿ ಯಾರನ್ನೋ ಟಾರ್ಗೇಟ್ ಮಾಡಬೇಕೆನ್ನುವ ಉದ್ದೇಶ ಇಲ್ಲ. ಪ್ರಕರಣವನ್ನು ಉದ್ದೇಶ ಪೂರ್ವಕವಾಗಿ ದಿಕ್ಕು ತಪ್ಪಿಸಲಾಗ್ತಿದೆ. ಗಜನಿ ಟೂಲ್ ಆಗಿ ರಾಜ ಜಯಚಂದ್ರನನ್ನ ಬಳಸಿಕೊಂಡ. ಅದೇ ರೀತಿ ಇಲ್ಲಿಯೂ ತಿಮರೋಡಿ ಮತ್ತು‌ ಮಟ್ಟಣ್ಣನ ಬಳಸಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ದುರುದ್ದೇಶ ಇದೆ ಎಂದು ಪರಿಷತ್ ಸದಸ್ಯ ಸಿ ಟಿ ರವಿ ಮತ್ತದೇ ಕಿಸಿದಿದ್ದನ್ನೇ ಕಿಸಿಯೋ ಕಿಸ್ಬಾಯಿ ದಾಸ ಅನ್ನೋ ತರ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಸರ್ಕಾರ ಯಾಕೆ‌ ಅಪಪ್ರಚಾರ ಮಾಡಿರೋರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಸಿಎಂ ಮೇಲೆ ‌ಆರೋಪ ಕೇಳಿ‌ಬಂದಾಗ ಕಾಂಗ್ರೆಸ್ಸಿಗರಿಗೆ ನೋವಾಯ್ತು. ಆದರೆ ಧರ್ಮಾಧಿಕಾರಿಗಳ ಮೇಲೆ‌ ಅಪಚಾರ ಮಾಡಿದ್ದಾಗ ನೋವಾಗಬೇಕಿತ್ತಲ್ಲ. ಆದರೆ ಯಾಕೆ ಆಗಿಲ್ಲ ಅರವಳಿಕೆ‌ ಇಂಜಿಕ್ಷನ್ ಕೊಟ್ಟಿದ್ರಾ? ದೂರುದಾರನ ಮಂಪರು ಪರೀಕ್ಷೆಗೆ ಒಳಪಡಿಸಿ, ಯ್ಯೂಟೂಬರ್ಸ್‌ನ ತನಿಖೆಗೆ ಒಳಪಡಿಸಿ. ಇಲ್ಲದೇ ಇದ್ದರೆ ನಿಮ್ಮ ಮೇಲೆ‌ ಆಪಾದನೆ‌ ಬರುತ್ತೆ ಎಂದು ಅದೇ ಪದಗಳನ್ನು ಪುನರುಚ್ಚರಿಸಿದ್ದಾರೆ.

ಶಶಿಕಾಂತ್ ಸೆಂಥಿಲ್ ಇದರ‌ ಹಿಂದೆ ಬರೋ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ತಮಿಳುನಾಡಿನಲ್ಲಿ ಸನಾತನ ಧರ್ಮಕ್ಕೆ ಅಪಮಾನ‌ ಮಾಡಿರೊರ ಜೊತೆ ಕಾಂಗ್ರೆಸ್ ಮೈತ್ರಿ‌ ಮಾಡಿಕೊಂಡಿದೆ. ಹೀಗಾಗಿ ಆ ಖಾಯಿಲೆಯೂ ಇವರಿಗೆ ಅಂಟಿರಬಹದು. ನಾವು ದೇವರನ್ನ ಪೂಜಿಸಿದ ಮೇಲೆ ಜಗತ್ತಿಗೆ ಒಳ್ಳೆಯದನ್ನ ಬಯಸುತ್ತೇವೆ. ಆದರೆ ಹಿಂದೂ ಧರ್ಮದ ಬಗ್ಗೆಯೇ ಅವರು ಅವಹೇಳನ ಮಾಡ್ತಾರೆ. ಅಂತವರ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ ಎಂದು ಸಿ ಟಿ ರವಿ ಅವಲತ್ತುಕೊಂಡರು.