Home News ಅಭಿಮಾನಿಗಳ ಮನಗೆದ್ದ ಭಾಗ್ಯವಂತ ಪುನೀತ್ ರಾಜ್ ಕಮಾರ್ ಅಂತ್ಯಕ್ರಿಯೆ ನಾಳೆ ನಡೆಯಲಿದೆ.: :ಸಿಎಂ ಬೊಮ್ಮಾಯಿ ...

ಅಭಿಮಾನಿಗಳ ಮನಗೆದ್ದ ಭಾಗ್ಯವಂತ ಪುನೀತ್ ರಾಜ್ ಕಮಾರ್ ಅಂತ್ಯಕ್ರಿಯೆ ನಾಳೆ ನಡೆಯಲಿದೆ.: :ಸಿಎಂ ಬೊಮ್ಮಾಯಿ ಹೇಳಿಕೆ.

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ರಾಜ್ ಕುಮಾರ್ ರವರ ಕಿರಿಯ ಪುತ್ರ ಪುನೀತ್ ರಾಜ್‍ಕುಮಾರ್ ಅವರು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 5.30ರ ಸುಮಾರಿಗೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದರು.ಆದರೆ ಪುನೀತ್ ಅವರ ಮಗಳು ಅಮೇರಿಕಾ ದಿಂದ ಬರಲು ತಡ ಆಗುವ ಕಾರಣ ಅಂತ್ಯಕ್ರಿಯೆ ನಾಳೆ ನಡೆಯಲಿದೆ.

ಪುನೀತ್ ಅವರ ಮಗಳು ಧೃತಿ ಈಗಾಗಲೇ ದೆಹಲಿಯನ್ನು ತಲುಪಿದ್ದಾರೆ. ಅವರು ಬರಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ. 5.30 ನಂತರ ಅಂತ್ಯಕ್ರಿಯೆ ಮಾಡಲು ಸಾಧ್ಯವಿಲ್ಲ. ಯಾಕಂದರೆ ಜಾಗ ತುಂಬಾ ಕಿರಿದಾಗಿದ್ದು, ಕತ್ತಲಾದರೆ ಕಷ್ಟ ಸಾಧ್ಯ. ಹೀಗಾಗಿ ಪುನೀತ್ ಅವರ ಸಹೋದರ ಶಿವರಾಜ್‍ಕುಮಾರ್ ಅವರ ಬಳಿ ಹಾಗೂ ಕುಟುಂಬದ ಜೊತೆಗೆ ಚರ್ಚೆ ಮಾಡಿ ನಾಳೆ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಮಾಡಲಾಗಿದೆ ಯಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ನಾಳೆವರೆಗೂ ಅಭಿಮಾನಿಗಳಿಗೆ ಬರಲು ಅವಕಾಶ ನೀಡಲಾಗಿದೆ.

ಸಾವಿರಾರು ಅಭಿಮಾನಿಗಳು ಪುನೀತ್ ರವರ ಅಂತಿಮ ದರ್ಶನಕೆಂದು ಕಂಠೀರವ ಸ್ಟುಡಿಯೋಕ್ಕೆ ಬರುತ್ತಿದ್ದಾರೆ.ಅಂತಿಮ ದರ್ಶನದ ವೇಳೆ ಶಾಂತಿ ಕಾಪಾಡಿಕೊಳ್ಳುಂತೆ ಸಿಎಂ ಬೊಮ್ಮಯಿ ತಿಳಿಸಿದ್ದಾರೆ..

ಧ್ರುತಿ ಅವರು ಬಂದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇನ್ನೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ ಆಪ್ತವಲಯಕ್ಕಷ್ಟೇ ಅವಕಾಶ ಕಲ್ಪಿಸಿಕೊಡಲಾಗಿದೆ.