Home News Court: ಅತ್ಯಾಚಾರದ ವೇಳೆ ಸಂತ್ರಸ್ತೆಯ ಗುಪ್ತಾಂಗಕ್ಕೆ ಗಾಯಗಳಾಗದಿದ್ದರು ಶಿಕ್ಷೆ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶ

Court: ಅತ್ಯಾಚಾರದ ವೇಳೆ ಸಂತ್ರಸ್ತೆಯ ಗುಪ್ತಾಂಗಕ್ಕೆ ಗಾಯಗಳಾಗದಿದ್ದರು ಶಿಕ್ಷೆ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶ

Hindu neighbor gifts plot of land

Hindu neighbour gifts land to Muslim journalist

Court: 40 ವರ್ಷಗಳ ಹಿಂದೆ ಶಾಲಾ ಬಾಲಕಿಯೊಬ್ಬಳ ಮೇಲೆ ಟ್ಯೂಷನ್ ಶಿಕ್ಷಕನಿಂದ ನಡೆದ ಲೈಂಗಿಕ ಹಲ್ಲೆಯ ಪ್ರಕರಣದಲ್ಲಿ, ಆರೋಪಿಯು ಬಾಲಕಿಯ ಗುಪ್ತಾಂಗಕ್ಕೆ ಯಾವುದೇ ಗಾಯಗಳಾಗದಿರುವ ಕಾರಣ ಅತ್ಯಾಚಾರ ಆರೋಪವನ್ನು ಸಾಬೀತುಪಡಿಸಲಾಗದು, ಅಲ್ಲದೆ ಬಾಲಕಿಯ ತಾಯಿಯು ಚಾರಿತ್ರ್ಯಹೀನ ಮಹಿಳೆಯಾಗಿದ್ದು ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ವಕೀಲರ ವಾದವಾಗಿತ್ತು.

ಆದರೆ ನ್ಯಾಯಮೂರ್ತಿಗಳಾದ ಸುದೀಪ್ ಮೆಹ್ರಾ ಮತ್ತು ಪ್ರಸನ್ನ ಬಿ ವರಾಳೆ ಅವರನ್ನು ಒಳಗೊಂಡ ಪೀಠವು (Court) ಈ ಎರಡು ವಾದಗಳನ್ನು ತಳ್ಳಿ ಹಾಕಿ “ಕೇವಲ ವೈದ್ಯಕೀಯ ಪುರಾವೆಯಲ್ಲಿ ಗಂಭೀರ ಗಾಯದ ಗುರುತುಗಳು ಇಲ್ಲ ಎಂದು ಹೇಳಿದ ಕಾರಣಕ್ಕೆ ಸಂತ್ರಸ್ತೆಯ ವಿಶ್ವಾಸಾರ್ಹ ಪುರಾವೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.

ಪ್ರತಿಯೊಂದು ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಯ ಗುಪ್ತಾಂಗಕ್ಕೆ ಗಾಯಗಳಾಗಿರಬೇಕು ಎಂದೇನಿಲ್ಲ. ಆಯಾ ಪ್ರಕರಣಗಳ ಇತರ ಅಂಶಗಳು ಮತ್ತು ಸಂದರ್ಭಗಳಿಗೆ ಅದು ಅನುಸಾರವಾಗಿರುತ್ತದೆ.” ಎಂದು ಸ್ಪಷ್ಟನೆ ನೀಡಿದ್ದಾರೆ.