Home Education PUC ಪ್ರವೇಶಕ್ಕೆ ಸಮವಸ್ತ್ರ ಕಡ್ಡಾಯ| ಪ್ರವೇಶ ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ !!!

PUC ಪ್ರವೇಶಕ್ಕೆ ಸಮವಸ್ತ್ರ ಕಡ್ಡಾಯ| ಪ್ರವೇಶ ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ !!!

Hindu neighbor gifts plot of land

Hindu neighbour gifts land to Muslim journalist

ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಾರಿಯ ಪದವಿಪೂರ್ವ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಪಿಯು ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರ ಕಡ್ಡಾಯ ಮಾಡಿದೆ. ಒಂದು ವೇಳೆ ಸಮವಸ್ತ್ರ ನಿಗದಿಪಡಿಸಿಲ್ಲವಾದರೆ ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಬಾರದ ಉಡುಪು ಧರಿಸಬೇಕು ಎಂದು ಸೂಚಿಸಲಾಗಿದೆ.

ಈ ಮೊದಲು ಪ್ರವೇಶ ಮಾರ್ಗಸೂಚಿಯಲ್ಲಿ ಸಮವಸ್ತ್ರ ಕುರಿತ ಯಾವುದೇ ಅಂಶವನ್ನು ಇರಲಿಲ್ಲ. ಆದರೆ ಈ ಬಾರಿ ಪದವಿಪೂರ್ವ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ಮಂಗಳವಾರದಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸಮವಸ್ತ್ರದ ಕುರಿತು ಸೇರಿಸಲಾಗಿದೆ. ಜೊತೆಗೆ ಪ್ರವೇಶಾತಿ ಕುರಿತು ಕೆಲವೊಂದು ನಿಯಮಗಳನ್ನು ಸೂಚಿಸಲಾಗಿದೆ.

ಮೇ 19ರಂದು 10ನೇ ತರಗತಿ ಫಲಿತಾಂಶ ಪ್ರಕಟವಾಗಲಿದ್ದು, ಅದರ ಮರುದಿನದಿಂದಲೇ ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ. ಪ್ರಥಮ ಪಿಯುಸಿಗೆ ದಂಡ ಶುಲ್ಕವಿಲ್ಲದೆ ಜೂನ್ 15 ದಾಖಲಾತಿಯ ಕೊನೆಯ ದಿನಾಂಕವಾಗಿದ್ದು, ದ್ವಿತೀಯ ಪಿಯುಸಿ ಪ್ರವೇಶಾತಿಗೆ ಜೂನ್ 1 ರಿಂದ 15 ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಶೈಕ್ಷಣಿಕ ಮೊದಲ ಅವಧಿ ಜೂನ್ 9 ರಿಂದ ಸೆಪ್ಟೆಂಬರ್ 30ರವರೆಗೆ ಇದ್ದು, ಎರಡನೇ ಅವಧಿ ಅಕ್ಟೋಬರ್ 13ರಿಂದ 2023ರ ಮಾರ್ಚ್ 31ರವರೆಗೆ ನಿಗದಿಪಡಿಸಲಾಗಿದೆ.