Home News ಪಿಯುಸಿ ಅಭ್ಯರ್ಥಿಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ 221 ಪೋಸ್ಟ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!!ಆನ್ಲೈನ್...

ಪಿಯುಸಿ ಅಭ್ಯರ್ಥಿಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ 221 ಪೋಸ್ಟ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!!
ಆನ್ಲೈನ್ ಅರ್ಜಿ ಸಲ್ಲಿಸಲು ನವೆಂಬರ್ 12 ಕೊನೆಯ ದಿನ

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲಿಚ್ಛಿಸುವ ಉದ್ಯೋಗಕಾಂಕ್ಷಿಗಳಿಗೆ ಸುವರ್ಣವಾಕಾಶವನ್ನು ಅಂಚೆ ಇಲಾಖೆ ಕಲ್ಪಿಸಿಕೊಟ್ಟಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 221 ಪೋಸ್ಟ್ ಮ್ಯಾನ್,ಸಾರ್ಟಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಸಲು ಇಲಾಖೆ ನಿರ್ಧರಿಸಿದ್ದು, ಕ್ರೀಡಾ ಕೋಟಾದಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಕ್ರೀಡೆಗಳಾದ ಬಿಲ್ಲುಗಾರಿಕೆ, ಕ್ರಿಕೆಟ್, ಸೈಕ್ಲಿಂಗ್, ಶೂಟಿಂಗ್, ಟೆನ್ನಿಸ್, ಕಬಡ್ಡಿ, ವಾಲಿಬಾಲ್, ಚೆಸ್, ಹಾಕಿ ಮುಂತಾದವುಗಳಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅಭ್ಯರ್ಥಿಗಳು ಪ್ರಯತ್ನಸಬಹುದಾಗಿದೆ.

ಅಭ್ಯರ್ಥಿಗಳು ಶೈಕ್ಷಣಿಕವಾಗಿ ಪಿಯುಸಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕಾಗಿದ್ದು, ಆನ್ಲೈನ್ ಅರ್ಜಿ ಸಲ್ಲಿಸಲು ನವೆಂಬರ್ 12 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್ https://www.indiapost.gov.in/vas/Pages/IndiaPostHome.aspx ನ್ನು ವೀಕ್ಷಿಸಬಹುದಾಗಿದೆ.

ಇಲಾಖೆಯ ಉಪಯುಕ್ತ ಅಧಿಸೂಚನೆಗಾಗಿ https://www.indiapost.gov.in/VAS/Pages/Content/Recruitments.aspx?Category=Recruitment ಈ ಲಿಂಕ್ ಬಳಸಬಹುದಾಗಿದೆ.