Home News Kalasa: ಬಯಲಾಗುತ್ತಿವೆ ಕಾನೂನು ಕಾಪಾಡೋ ಪೋಲೀಸರ ಕಾಮಪುರಾಣ – ನ್ಯಾಯ ಕೇಳಲು ಬರುವ ಮಹಿಳೆಯರನ್ನೇ ಮಂಚಕ್ಕೆ...

Kalasa: ಬಯಲಾಗುತ್ತಿವೆ ಕಾನೂನು ಕಾಪಾಡೋ ಪೋಲೀಸರ ಕಾಮಪುರಾಣ – ನ್ಯಾಯ ಕೇಳಲು ಬರುವ ಮಹಿಳೆಯರನ್ನೇ ಮಂಚಕ್ಕೆ ಕರೆಯುತ್ತಾರೆ ಈ PSI ?

Hindu neighbor gifts plot of land

Hindu neighbour gifts land to Muslim journalist

Kalasa: ಕಾನೂನನ್ನು ಕಾಪಾಡುವ ಪೊಲೀಸರೇ ನೀಚ ಕೃತ್ಯಗಳನ್ನು ಎಸಗಿದರೆ ಅದು ಬೇಲಿಯೇ ಎದ್ದು ಹೊಲ ಮೇಯ್ದಂತೆ. ಇತ್ತೀಚಿಗೆ ಇಂತಹ ಕೃತ್ಯಗಳು ವಿಪರೀತವಾಗಿವಾಗೆವೆ. ಮೊನ್ನೆ ಮೊನ್ನೆ ತುಮಕೂರಲ್ಲಿ ಇಂಥ ಪ್ರಕರಣ ಬೆಳಕಿಗೆ ಬಂದಿದ್ದು ಇಡೀ ಪೊಲೀಸ್ ಇಲಾಖೆಯೇ ತಲೆತಾಗ್ಗಿಸುವಂತೆ ಆಗಿತ್ತು. ಇದೀಗ ಮತ್ತೆ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.

 

ಹೌದು, ಕಾಫಿ ನಾಡು ಚಿಕ್ಕಮಗಳೂರಿನ(Chikkamagaluru) ಕಳಸದ ಪಿಎಸ್‌ಐ ನಿತ್ಯಾನಂದಗೌಡ ವಿರುದ್ಧ ಈ ರೀತಿಯ ಗಂಭೀರ ಆರೋಪ ಕೇಳುಬಂದಿದ್ದು, ಅವರ ಪತ್ನಿಯೇ ಈ ಆರೋಪ ಮಾಡಿದ್ದಾರೆ. ಈ ಕುರಿತು ದೂರು ನೀಡಿರುವ ಅವರು ‘ನನ್ನ ಪತಿ ಪೊಲೀಸ್ ಠಾಣೆಗೆ ನ್ಯಾಯ ಕೇಳಿ ಬರುತ್ತಿದ್ದ ಮಹಿಳೆಯರನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ನನಗೆ 50 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

 

ಪತ್ನಿಯ ದೂರಿನಲ್ಲಿ ಏನಿದೆ?

ಉಡುಪಿಯ ಕಾಪು ಠಾಣೆಯಲ್ಲಿದ್ದಾಗ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ನಾನು ಅವರ ರೂಂಗೆ ಹೋದಾಗ ಕಾಂಡೋಮ್‌ಗಳು ಪತ್ತೆಯಾಗಿದ್ದವು ಎಂದು ಅವರ ಪತ್ನಿ ಆರೋಪಿಸಿದ್ದಾರೆ. ಆತ ಕೆಲಸ ಮಾಡಿರುವ ಠಾಣೆಗಳಿಗೆ ಕಷ್ಟ ಎಂದು ಬರುವ ಹಾಗೂ ಪಾಸ್‌ಪೋರ್ಟ್‌ಗೆ ಬರುವ ಮಹಿಳೆಯರನ್ನ ಮಂಚಕ್ಕೆ ಕರೆಯುತ್ತಾರೆ.

 

ಮುಸ್ಲಿಮರು ಪಿಎಸ್‌ಐಗೆ ಹೊಡೆಯಲು ಬಂದಾಗ ಎಸ್‌ಪಿ ಅವರನ್ನು ರಕ್ಷಿಸಿದ್ದರು. ಕೋಟಾ ಠಾಣೆಯಲ್ಲೂ ಮಹಿಳೆ ನ್ಯಾಯ ಕೊಡಿಸುತ್ತೇನೆ ಎಂದು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಮಹಿಳೆ ಒಬ್ಬಳನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದರು. ಆ ಮಹಿಳೆಗೆ 4 ಲಕ್ಷ ರೂ. ಹಣ ಕೊಟ್ಟು ಬಚಾವ್ ಆಗಿದ್ದಾರೆ ಎಂದು ಆರೋಪಿಸಿಸಲಾಗಿದೆ.ಈ ಸಂಬಂಧ ಪಿಎಸ್‌ಐ ಪತ್ನಿ ನೀಡಿದ ದೂರಿನ ಮೇರೆಗೆ ಕಳಸ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.