Home News ಸುಳ್ಯ ಲಯನ್ಸ್‌ ಕ್ಲಬ್‌, ಲಯನ್ಸ್‌ ಪ್ರಾಂತ-5ರ ವತಿಯಿಂದ ಪ್ರಾಂತೀಯ ಸಮ್ಮೇಳನ ʼವರ್ಣʼ ; ಫೆ.22 ರಂದು...

ಸುಳ್ಯ ಲಯನ್ಸ್‌ ಕ್ಲಬ್‌, ಲಯನ್ಸ್‌ ಪ್ರಾಂತ-5ರ ವತಿಯಿಂದ ಪ್ರಾಂತೀಯ ಸಮ್ಮೇಳನ ʼವರ್ಣʼ ; ಫೆ.22 ರಂದು ಸುಳ್ಯದ ಬಂಟರ ಭವನದಲ್ಲಿ 

Hindu neighbor gifts plot of land

Hindu neighbour gifts land to Muslim journalist

Sullia: ಸುಳ್ಯ ಲಯನ್ಸ್‌ ಕ್ಲಬ್‌, ಲಯನ್ಸ್‌ ಪ್ರಾಂತ 5 ರ ವತಿಯಿಂದ ಲಯನ್ಸ್‌ ಪ್ರಾಂತೀಯ ಸಮ್ಮೇಳನ ʼವರ್ಣʼ ಸುಳ್ಯದ ಬಂಟರ ಭವನದಲ್ಲಿ ಫೆ.22 ರಂದು ನಡೆಯಲಿದೆ ಎಂದು ಪ್ರಾಂತೀಯ ಸಮ್ಮೇಳನ ಸಂಘಟನಾ ಸಮಿತಿಯ ಅಧ್ಯಕ್ಷ ಎನ್.ಜಯ ಪ್ರಕಾಶ್‌ ರೈ ಹಾಗೂ ಲಯನ್ಸ್‌ ಪ್ರಾಂತೀಯ ಅಧ್ಯಕ್ಷ ಗಂಗಾಧರ ರೈ ಎಸ್‌ ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಫೆ.22 ರಂದು 4 ಗಂಟೆಯಿಂದ 10 ಗಂಟೆಯವರೆಗೆ ನಡೆಯುವ ಸಮ್ಮೇಳನದಲ್ಲಿ ಪ್ರಾಂತ್ಯದಲ್ಲಿರುವ 7 ಲಯನ್ಸ್‌ ಕ್ಲಬರ್‌ಗಳ ಸದಸ್ಯರು ಹಾಗೂ ಕುಟುಂಬ ವರ್ಗದವರು ಸೇರಿ 300 ರಿಂದ 400 ಮಂದಿ ಭಾಗವಹಿಸಲಿದ್ದು, 4 ಗಂಟೆಯಿಂದ ನೋಂದಾವಣಿ, ರಿಫ್ರೆಶ್‌ಮೆಂಟ್‌, ಫನ್‌ಗೇಮ್ಸ್‌ ಇರಲಿದೆ. 5.30 ಕ್ಕೆ ಎಲ್ಲಾ ಕ್ಲಬ್‌ಗಳ ಬ್ಯಾನರ್‌ ಪ್ರೆಸೆಂಟೇಷನ್‌ ಇರಲಿದ್ದು, 6 ಗಂಟೆಯಿಂದ 8.30ರ ವರೆಗೆ ಪ್ರಾಂತೀಯ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ. ನಂತರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ರ ಬಳಿಕ ಸಹಭೋಜನ ಮತ್ತು ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ಹಾಗೂ ಸೋಣಂಗೇರಿಯಲ್ಲಿ ಬಸ್‌ ತಂಗುದಾಣ ನಿರ್ಮಿಸಲಾಗುವುದು ಎಂದು ಎನ್.ಜಯಪ್ರಕಾಶ್‌ ರೈ ಮತ್ತು ಗಂದಾಧರ ರೈ ಅವರು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಸುಳ್ಯ ಲಯನ್ಸ್‌ ಕ್ಲಬ್‌ ಅಧ್ಯಕ್ಷ ರಾಮಕೃಷ್ಣ ರೈ, ಕಾರ್ಯದರ್ಶಿ ರಾಮಚಂದ್ರ ಪಲ್ಲತ್ತಡ್ಕ, ಖಜಾಂಜಿ ರಮೇಶ್‌ ಶೆಟ್ಟಿ, ಪ್ರಾಂತೀಯ ಸಮ್ಮೇಳನ ಸಂಘಟನಾ ಸಮಿತಿಯ ಕಾರ್ಯದರ್ಶಿ ದೀಪಕ್‌ ಕುತ್ತಮೊಟ್ಟೆ, ಖಜಾಂಜಿ ದೊಡ್ಡಣ್ಣ ಬರೆಮೇಲು ಉಪಸ್ಥಿತರಿದ್ದರು.