Home News Rahul Gandhi: ನನಗೂ, ಪ್ರಿಯಾಂಕಗೂ ಅಮ್ಮನ ಪ್ರೀತಿ ಇಲ್ಲ, ಅದೇನಿದ್ದರೂ ನಮ್ಮ ಮನೆಯ ನಾಯಿಗೆ –...

Rahul Gandhi: ನನಗೂ, ಪ್ರಿಯಾಂಕಗೂ ಅಮ್ಮನ ಪ್ರೀತಿ ಇಲ್ಲ, ಅದೇನಿದ್ದರೂ ನಮ್ಮ ಮನೆಯ ನಾಯಿಗೆ – ರಾಹುಲ್ ಗಾಂಧಿ ಪೋಸ್ಟ್ ವೈರಲ್

Rahul Gandhi

Hindu neighbor gifts plot of land

Hindu neighbour gifts land to Muslim journalist

Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ(Sonia Gandhi)ಅವರು ಮುದ್ದಿನ ನಾಯಿ ಮರಿ ನೂರಿಯ ಜೊತೆಗಿನ ಪ್ರೀತಿಯ ಕ್ಷಣವನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೋಸ್ಟ್ ಹಂಚಿಕೊಂಡ ರಾಹುಲ್ ಗಾಂಧಿ(Rahul Gandi) ಅವರು ‘ಅಮ್ಮನ ಫೇವರೆಟ್ ಯಾರೆಂದು ಗೊತ್ತಾಯ್ತ?’ ಎಂದು ರಾಹುಲ್ ಅದಕ್ಕೆ ಕ್ಯಾಪ್ಷನ್ ನೀಡಿದ್ದಾರೆ. ಅಲ್ಲದೆ ‘ಅಮ್ಮನ ಪ್ರೀತಿ ನನಗೂ ಇಲ್ಲ, ಪ್ರಿಯಾಂಕಾಗೂ ಇಲ್ಲ, ನಮ್ಮ ಮನೆಯ ನಾಯಿ ನೂರಿಗೆ ಅಂತ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಕಳೆದ 24 ಗಂಟೆಗಳಲ್ಲಿ 7,81,596 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ 5,400ಕ್ಕೂ ಹೆಚ್ಚು ಮಂದಿ ಕಾಮೆಂಟ್‌ ಮಾಡಿದ್ದಾರೆ.

ಅಂದಹಾಗೆ ಉತ್ತರ ಗೋವಾದ(North Goa) ಮಾಪುಸಾದಲ್ಲಿರುವ ನಾಯಿಯ ಕೆನಲ್‌ನಿಂದ ನಾಯಿಮರಿಯನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಅಂದಿನಿಂದ ಇದು ಗಾಂಧಿ ಕುಟುಂಬದಲ್ಲಿ ಪ್ರೀತಿಯ ಒಡನಾಡಿಯಾಗಿ ಮಾರ್ಪಟ್ಟಿದೆ. ಈ ಕುರಿತು ರಾಹುಲ್ ಗಾಂಧಿ ಯೂಟ್ಯೂಬ್​ನಲ್ಲಿ ವಿಡಿಯೋವನ್ನೂ ಮಾಡಿದ್ದರು.

ಒಟ್ಟಿನಲ್ಲಿ ಇದೀಗ ʻನೂರಿʼ ಎಂಬ ನಾಯಿ ಮರಿಯನ್ನು ಎತ್ತು ಮುದ್ದಾಡುತ್ತಿರುವ ಫೋಟೋವನ್ನು ರಾಹುಲ್‌ ಗಾಂಧಿ ಹಂಚಿಕೊಂಡ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸದಾ ರಾಜಕೀಯ ಬ್ಯುಸಿಯಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಅಮ್ಮನ ಪ್ರೀತಿಯ ಬಗ್ಗೆ ಹಾಕಿದ ಇನ್‌ಸ್ಟಾ ಪೋಸ್ಟ್‌ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

 

View this post on Instagram

 

A post shared by Rahul Gandhi (@rahulgandhi)