

Earthquake: ಸೋಮವಾರ ಪಾಕಿಸ್ತಾನದ ಕರಾಚಿಯಲ್ಲಿ ಸರಣಿ ಭೂಕಂಪ ಉಂಟಾಗಿದ್ದು, ಕರಾಚಿಯ ಜಿಲ್ಲಾ ಜೈಲಿನ ಗೋಡೆ ಕುಸಿದಿರುತ್ತದೆ. ಈ ವೇಳೆ ಇದನ್ನು ಲಾಭವಾಗಿ ಪಡೆದ 216 ಖೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.
ರಿಕ್ಟರ್ ಮಾಪಕದಲ್ಲಿ 3.2 ಹಾಗೂ 3.6 ಕಡಿಮೆ ತೀವ್ರತೆಯ 3 ಸರಣಿ ಭೂಕಂಪ ಉಂಟಾಗಿದ್ದು, ಜೈಲಿನ ಗೋಡೆಗಳು ಭಾಗಶಃ ಕುಸಿದಿರುತ್ತವೆ. ಈ ಸಮಯದಲ್ಲಿ ಖೈದಿಗಳು ಮುಖ್ಯ ದ್ವಾರದ ಮೂಲಕವೇ ಹೊರಹೋಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇನ್ನೂ ಮಾಲಿರ್ ಜಿಲ್ಲಾ ಜೈಲಿನಲ್ಲಿ 600 ರಿಂದ 1000 ಜನ ಖೈದಿಗಳಿದ್ದು, ಇವರ ಸುರಕ್ಷತೆಯ ದೃಷ್ಟಿಯಿಂದ ಬೇರೆಡೆ ಇವರನ್ನು ಸ್ಥಳಾಂತರಿಸುವಾಗ ನೂಕು ನುಗ್ಗಲು ಉಂಟಾಗಿ ಕೆಲವು ಖೈದಿಗಳು ಶಸ್ತ್ರಾಸ್ತ್ರಗಳನ್ನು ಹಿಡಿಕೊಂಡು ಪರಾರಿಯಾಗಿದ್ದು, ಈ ಸಮಯದಲ್ಲಿ ಜೈಲಿನ ಹೊರ ಹಾಗೂ ಒಳ ಭಾಗದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಓರ್ವ ಖೈದಿ ಸಾವನ್ನಪ್ಪಿದ್ದು, ಮೂವರು ಪೊಲೀಸರು ಗಾಯಗೊಂಡಿರುತ್ತಾರೆ. ಈ ಕುರಿತಾಗಿ ಪರಿಶೀಲನೆಗಳು ನಡೆಯುತ್ತಿವೆ.













