Home News Jharkhand: 10ನೇ ತರಗತಿಯ 80 ಬಾಲಕಿಯರ ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿದ ಪ್ರಿನ್ಸಿಪಲ್ – ಅಷ್ಟಕ್ಕೂ...

Jharkhand: 10ನೇ ತರಗತಿಯ 80 ಬಾಲಕಿಯರ ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿದ ಪ್ರಿನ್ಸಿಪಲ್ – ಅಷ್ಟಕ್ಕೂ ಶಾಲೆಯಲ್ಲಿ ನಡೆದಿದ್ದೇನು?

Hindu neighbor gifts plot of land

Hindu neighbour gifts land to Muslim journalist

Jharkhand: ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು 10 ನೇ ತರಗತಿಯ 80 ಬಾಲಕಿಯರ ತಮ್ಮ ಶರ್ಟ್‌ಗಳನ್ನು ತೆಗೆಯುವಂತೆ ಮಾಡಿ ಮನೆಗೆ ಕಳುಹಿಸಿದ್ದಾರೆ ಎಂಬ ಗಂಭೀರ ಆರೋಪ ಒಂದು ಜಾರ್ಖಂಡ್ನಲ್ಲಿ ಕೇಳಿಬಂದಿದೆ.

ಹೌದು, ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯರು ಧರಿಸಲು ಷರ್ಟ್ ಇಲ್ಲದೇ, ಕೇವಲ ಬ್ಲೇಜರ್‌ಗಳಲ್ಲಿ ಮನೆಗೆ ಮರಳುವಂತೆ ಮಾಡಿದ ಪ್ರಾಂಶುಪಾಲರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಆಡಳಿತ ಮಂಡಳಿ ತನಿಖೆಗೆ ಮುಂದಾಗಿದೆ.

ಶಾಲೆಯಲ್ಲಿ ಆಗಿದ್ದೇನು?
ಜೋರಾಪೋಖರ್ ಪೊಲೀಸ್ ಠಾಣೆ ವ್ಯಾಪ್ತಿಯ ದಿಗ್ವಾಡಿಹ್‌ನಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು,10ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಪರಸ್ಪರರ ಅಂಗಿಯಲ್ಲಿ ಸಂದೇಶ ಬರೆದು ‘ಪೆನ್ ಡೇ’ ಆಚರಿಸುತ್ತಿದ್ದರು. ಇದನ್ನು ವಿರೋಧಿಸಿ ಪ್ರಾಂಶುಪಾಲರು ಸಿಡಿಮಿಡಿಗೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಕ್ಷಮೆಯಾಚಿಸಿದರೂ ಅವರ ಅಂಗಿಗಳನ್ನು ತೆಗೆಯುವಂತೆ ಹೇಳಿದ್ದಾರೆ ಎನ್ನಲಾಗಿದೆ. ಎಲ್ಲಾ ವಿದ್ಯಾರ್ಥಿಗಳನ್ನು ಶರ್ಟ್ ಇಲ್ಲದೆ ಬ್ಲೇಜರ್‌ನಲ್ಲಿ ಮನೆಗೆ ಕಳುಹಿಸಲಾಗಿದೆ ಎಂದು ಪೋಷಕರು ಡಿಸಿಗೆ ತಿಳಿಸಿದ್ದಾರೆ.

ಈ ನಡವಳಿಕೆಗೆ ಪ್ರಾಂಶುಪಾಲರ ವಿರುದ್ಧ ಹಲವಾರು ಪೋಷಕರು ಆಕ್ರೋಶ ವ್ಯಕ್ತಪಡಿಸಿ ದೂರು ದಾಖಲಿಸಲಾಗಿದ್ದು, ಇದನ್ನು ಶಾಲಾ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದೆ.