Home News PM Modi: ಆಗಸ್ಟ್‌ 10 ರಂದು ಬೆಂಗಳೂರಲ್ಲಿ ನಿಗದಿ ಮಾಡಲಾಗಿದ್ದ ಪ್ರಧಾನಿ ಮೋದಿ ರೋಡ್‌ಶೋ, ಸಮಾವೇಶ...

PM Modi: ಆಗಸ್ಟ್‌ 10 ರಂದು ಬೆಂಗಳೂರಲ್ಲಿ ನಿಗದಿ ಮಾಡಲಾಗಿದ್ದ ಪ್ರಧಾನಿ ಮೋದಿ ರೋಡ್‌ಶೋ, ಸಮಾವೇಶ ರದ್ದು!

Modi Retirement

Hindu neighbor gifts plot of land

Hindu neighbour gifts land to Muslim journalist

Bangalore: ಆಗಸ್ಟ್‌ 10 ರಂದು ಬೆಂಗಳೂರಿನಲ್ಲಿ ನಿಗದಿಪಡಿಸಲಾಗಿದ್ದ ಪ್ರಧಾನಿ ಮೋದಿ ರೋಡ್‌ ಶೋ, ಸಮಾವೇಶ ರದ್ದಾಗಿರುವುದಾಗಿ ವರದಿಯಾಗಿದೆ. ಮೋದಿ ಪ್ರಧಾನಿ ಅಂದು ಸರಕಾರಿ ಕಾರ್ಯಕ್ರಮದಲ್ಲಷ್ಟೇ ಭಾಗಿಗೊಳ್ಳಲಿದ್ದಾರೆ.

ಸಮಯದ ಅಭಾವದ ಕಾರಣ ಬಿಜೆಪಿ ಪ್ರಧಾನಿ ಮೋದಿ ಕಾರ್ಯಕ್ರಮವನ್ನು ರದ್ದು ಮಾಡಿದ್ದು, ಹೀಗಾಗಿ ರೋಡ್‌ ಶೋ, ಸಮಾವೇಶ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತ್ರ ಪ್ರಧಾನಿ ಮೋದಿ ಭಾಗಿಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಜಯನಗರದಲ್ಲಿರುವ ಶಾಲಿನ ಆಟದ ಮೈದಾನದಲ್ಲಿ ಸಮಾವೇಶ ನಿಗದಿ ಮಾಡಲಾಗಿತ್ತು. ಆದರೆ ಸಮಯದ ಅಭಾವದ ಕಾರಣ ಈ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಪ್ರಧಾನಿ ಮೋದಿ ಬೆಂಗಳೂರು ಮೆಟ್ರೋ ಹಳದಿ ಮಾರ್ಗವನ್ನು ಆಗಸ್ಟ್‌ 10 ರಂದು ಉದ್ಘಾಟನೆ ಮಾಡಲಿದ್ದು, ಬೊಮ್ಮಸಂದ್ರದಿಂದ ರಾಗಿಗುಡ್ಡದವರೆಗೆ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ. ಈ ವೇಳೆ ಪ್ರಯಾಣಿಕರ ಜೊತೆ ಸಂವಾದ ನಡೆಸುವ ಸಾಧ್ಯತೆಯಿದೆ. ಬಸವನಗುಡಿಯ ರಾಷ್ಟ್ರೀಯ ವಿದ್ಯಾಲಯ ರಸ್ತೆ ನಿಲ್ದಾಣದಿಂದ ಸಿಲ್ಕ್‌ಬೋರ್ಡ್‌, ಜಯದೇವ ಆಸ್ಪತ್ರೆ ಪ್ರಮುಖ ಕೇಂದ್ರಗಳ ಮೂಲಕ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸಲಾಗಿದೆ. ಚಾಲಕರಹಿತ ಮೆಟ್ರೋ ರೈಲು ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿದೆ. 19.15 ಕಿ.ಮೀ. ದೂರ ಹೊಂದಿರುವ ಮೆಟ್ರೋ ಸಂಚಾರವಿರಲಿದೆ.

ಇದನ್ನು ಓದಿ: Ghorakpura: ಹೋಟೆಲ್ ನಲ್ಲಿ ಬಿಲ್ ಕಟ್ಟುವುದನ್ನು ತಪ್ಪಿಸಲು ಪ್ಲಾನ್- ವೆಜ್ ಬಿರಿಯಾನಿಯಲ್ಲಿ ಮೂಳೆಯನ್ನು ಇರಿಸಿದ ವ್ಯಕ್ತಿ !